Tuesday, April 22, 2025
Google search engine

Homeರಾಜಕೀಯಸರ್ಕಾರಕ್ಕೆ, ಪಕ್ಷಕ್ಕೆ, ಪೆನ್ ಡ್ರೈವ್ ಗೆ ಯಾವ ಸಂಬಂಧವಿಲ್ಲ: ರಾಮಲಿಂಗಾರೆಡ್ಡಿ ಸ್ಪಷ್ಟನೆ

ಸರ್ಕಾರಕ್ಕೆ, ಪಕ್ಷಕ್ಕೆ, ಪೆನ್ ಡ್ರೈವ್ ಗೆ ಯಾವ ಸಂಬಂಧವಿಲ್ಲ: ರಾಮಲಿಂಗಾರೆಡ್ಡಿ ಸ್ಪಷ್ಟನೆ

ಚಿತ್ರದುರ್ಗ: ದೇವರಾಜೇಗೌಡ ವಕೀಲರು, ಬಿಜೆಪಿ ಮುಖಂಡರು. ನಾನು ಕೂಡ ಆ ವಿಡಿಯೋಗಳನ್ನು ನೋಡಿದ್ದೇನೆ. ಆದರಲ್ಲಿ ದೇವೇಗೌಡರು ಕುಟುಂಬದಿಂದ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಅವರ ವೈಯಕ್ತಿಕ ಜಗಳವನ್ನು ರಾಜ್ಯ ಮಟ್ಟಕ್ಕೆ ತಂದಿದ್ದಾರೆ. ಇದು ರೇವಣ್ಣ, ಶಿವರಾಮೇಗೌಡ, ದೇವಾರಾಜೇಗೌಡ ಅವರ ವೈಯಕ್ತಿಕ ಕಿತ್ತಾಟ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಳೆನರಸೀಪುರದಲ್ಲಿ ಇರಬೇಕಿದ್ದ ಜಗಳ ರಾಜ್ಯ ಮಟ್ಟಕ್ಕೆ ಬಂದಿದೆ. ಸರ್ಕಾರಕ್ಕೆ, ಪೆನ್ ಡ್ರೈವ್ ಗೂ, ಡಿಕೆಶಿ ಯಾವ ಸಂಬಂಧ ಇಲ್ಲ. ದೇವೇರಾಜೇಗೌಡ ರಾಜಕೀಯ ಪಕ್ಷದ ಸದಸ್ಯ. ಬಿಜೆಪಿ ಪಕ್ಷದಿಂದ ನಿಂತು ಒಮ್ಮೆ ಸೋತಿದ್ದಾರೆ. ಅದಕ್ಕೆ ಬಿಜೆಪಿಯವರು ಏನು ಹೇಳುತ್ತಾರೆ ಅದನ್ನು ಇವರು ಹೇಳುತ್ತಾರೆ. ನಮ್ಮ ಸರ್ಕಾರಕ್ಕೆ, ಪಕ್ಷಕ್ಕೆ, ಪೆನ್ ಡ್ರೈವ್ ಗೆ ಯಾವ ಸಂಬಂಧ ಇಲ್ಲ ಎಂದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷವಾಗಿದೆ. ಒಂದು ವರ್ಷದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ಹಿಂದೆ ಇದ್ದಾಗ, ಈಗ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದೇವೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪಕ್ಕೆ ಮಾತನಾಡಿದ ಅವರು, ಬಿಜೆಪಿ ನಾಯಕರು ಸುಮ್ಮನೆ ಆ ರೀತಿ ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ 1350ಕ್ಕೂ ಹೆಚ್ಚು ಕೊಲೆಗಳಾಗಿವೆ. ಒಂದು ವರ್ಷದಲ್ಲಿ ಇಷ್ಟೊಂದು ಕೊಲೆಗಳಾಗಿವೆ. ಆದರೆ ಮೊನ್ನೆ ನಾಲ್ಕು ತಿಂಗಳಲ್ಲಿ 400 ಕೊಲೆಯಾಗಿವೆ ಎಂದು 1350 ಕೊಲೆ ಜಾಸ್ತಿಯೇ ಇಲ್ಲ 400 ಕೊಲೆ ಜಾಸ್ತಿಯೇ ಎಂಬ ಅರ್ಥದಲ್ಲಿ ಮಾತಾಡಿದರು.

ಬಿಜೆಪಿಯವರು ಲೆಕ್ಕ ತಿಳಿಯದೆ ಸುಮ್ಮನೆ ಮಾತನಾಡುತ್ತಾರೆ. ಯಾರ ಅವಧಿಯಲ್ಲಿ ಕೊಲೆಗಳು ಜಾಸ್ತಿಯಾಗಿವೆ ಅಂಕಿ ಅಂಶ ನೋಡಬೇಕು. ಅಂಕಿ ಅಂಶ ನೋಡಲ್ಲ ಸುಮ್ಮನೆ ಮಾತನಾಡುತ್ತಾರೆ ಎಂದರು.

ಚುನಾವಣೆ ಬಳಿಕ ಸರ್ಕಾರ ಪತನವಾಗುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಪತನವಾಗುವುದಿಲ್ಲ, ಅವರ ಪಾತ್ರ ಏನು ಇರುವುದಿಲ್ಲ. ಸರ್ಕಾರ ಯಾಕೆ ಪತನವಾಗುತ್ತದೆ ಹೇಳಲಿ. ಅವರು ಕೇವಲ ಸಿಂಗಲ್ ಡಿಜಿಟ್ ನಲ್ಲಿದ್ದಾರೆ. ಜೆಡಿಎಸ್, ಬಿಜೆಪಿ ಎಲ್ಲಾ ಸೇರಿ ಸಿಂಗಲ್ ಡಿಜಿಟ್ ಇದೆ ಎಂದರು.

ಚುನಾವಣಾ ಬಳಿಕ ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಮಾತನಾಡಿ, ಅದರ ಬಗ್ಗೆ ಮಾಹಿತಿಯಿಲ್ಲ, ಇತ್ತ ಸಿಎಂ ಬಂದಾಗ ನೀವೇ ಕೇಳಬೇಕು. ಅದೆಲ್ಲ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ. ಮಾಧ್ಯಮಗಳ ಮೂಲಕ ಯಾರು ಯಾರು ಸಹ ಹೀಗೆ ಮಾತಾಡಬಾರದು. ಹೈಕಮಾಂಡ್ ನಾಯಕರು ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದರು.

RELATED ARTICLES
- Advertisment -
Google search engine

Most Popular