Sunday, April 20, 2025
Google search engine

Homeಸಿನಿಮಾಪ್ರೆಗ್ನೆನ್ಸಿ ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್ ಪದ ಬಳಸಿದ್ದಕ್ಕಾಗಿ ಕರೀನಾ ಕಪೂರ್‌ಗೆ ನೋಟಿಸ್

ಪ್ರೆಗ್ನೆನ್ಸಿ ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್ ಪದ ಬಳಸಿದ್ದಕ್ಕಾಗಿ ಕರೀನಾ ಕಪೂರ್‌ಗೆ ನೋಟಿಸ್

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್‌ಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್ ನೀಡಿದೆ. ಕರೀನಾ ಅವರು ಗರ್ಭಾವಸ್ಥೆ ಕುರಿತು ಬರೆದಿರುವ ಕರೀನಾ ಕಪೂರ್ ಖಾನ್‌ಸ್ ಪ್ರೆಗ್ನೆನ್ಸಿ ಬೈಬಲ್ ದಿ ಅಲ್ಟಿಮೇಟ್ ಮ್ಯಾನ್ಯುಯಲ್ ಫಾರ್ ಮಾಮ್ಸ್-ಟು-ಬಿ ಪುಸ್ತಕದಲ್ಲಿ ಬೈಬಲ್ ಪದವನ್ನು ಬಳಸಿದ್ದು, ಅದರ ವಿರುದ್ಧ ವಕೀಲರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಆಧಾರದ ಮೇಲೆ ಅವರಿಗೆ ನೋಟಿಸ್ ನೀಡಲಾಗಿದೆ.

ತಮ್ಮ ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್ ಪದ ಬಳಿದ್ದಕ್ಕಾಗಿ, ಕರೀನಾ ಮತ್ತು ಪುಸ್ತಕ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ವಕೀಲ ಕ್ರಿಸ್ಟೋಫರ್ ಆಂಥೋನಿ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ. ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್ ಪದವನ್ನು ಯಾಕೆ ಬಳಸಲಾಗಿದೆ ಎಂಬುದರ ಕುರಿತು ಉತ್ತರಿಸುವಂತೆ ತನ್ನ ನೋಟಿಸ್‌ನಲ್ಲಿ ಕೇಳಿದೆ. ಆಂಟನಿ ಅವರು ತಮ್ಮ ಅರ್ಜಿಯಲ್ಲಿ ಪುಸ್ತಕದ ಮಾರಾಟವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಹೀಗಾಗಿ, ಪುಸ್ತಕಗಳ ಮಾರಾಟಗಾರರಿಗೂ ನೋಟಿಸ್ ನೀಡಲಾಗಿದೆ.

೨೦೨೧ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ಕರೀನಾ ಅವರು ತಮ್ಮ ಗರ್ಭಾವಸ್ಥೆಯ ಕುರಿತು ವಿವರಿಸಿದ್ದಾರೆ. ಅಲ್ಲದೆ, ನಿರೀಕ್ಷಿತ ತಾಯಂದಿರಿಗೆ ಆಹಾರ, ಫಿಟ್‌ನೆಸ್, ಸ್ವಯಂ-ಆರೈಕೆಯ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ.

ಆಂಥೋನಿ ಅವರು ಈ ಹಿಂದೆ, ಕರೀನಾ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ ಬಳಿಕ, ಅವರು ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್ ಪದವು ಹೇಗೆ ದುರ್ಬಳಕೆಯಾಗಿದೆ ಎಂಬುದನ್ನು ಸಾಬೀತು ಮಾಡವಲ್ಲಿ ವಿಫಲವಾದ ಕಾರಣ, ಅವರ ಅರ್ಜಿಯನ್ನು ವಜಾಗೊಳಿಸಲಾಗಿತ್ತು.
ಇದೀಗ, ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ಪ್ರತಿಕ್ರಿಯೆ ಕೇಳಿ ಕರೀನಾಗೆ ನೋಟಿಸ್ ಜಾರಿ ಮಾಡಿದೆ.

RELATED ARTICLES
- Advertisment -
Google search engine

Most Popular