ಬಾಗೇಪಲ್ಲಿ: ಕೆಡಿಪಿ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕೂಡಲೇ ನೋಟೀಸ್ ನೀಡಿ ಎಂದು ಗೂಳೂರು ಗ್ರಾಪಂ ಅಧ್ಯಕ್ಷೆ ಅನುರಾಧ ರಮೇಶ್‌ಬಾಬು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಾಲೂಕಿನ ಗೂಳೂರು ಗ್ರಾಪಂ ಕಚೇರಿಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಪಂ ವ್ಯಾಪ್ತಿಗೆ 20 ಇಲಾಖೆಗಳು ಬರುತ್ತವೆ. ಈ ಎಲ್ಲಾ ಇಲಾಖೆಗಳು ತಮ್ಮ ತಮ್ಮ ಇಲಾಖೆಯ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು.
ಆದರೆ 4 ಇಲಾಖೆಗಳ ಅಧಿಕಾರಿಗಳು ಮಾತ್ರ ಹಾಜರಾಗಿದ್ದಾರೆ. ಇದೇನು ಗ್ರಾಪಂ ಅಥವಾ ಧರ್ಮಸತ್ರನಾ ಗ್ರಾಪಂ ಬಗ್ಗೆ ಅಷ್ಟೊಂದು ನಿರ್ಲಕ್ಷ್ಯ ಮನೋಬಾವನೆಯೇ? ಮೂರು ತಿಂಗಳಿಗೊಮ್ಮೆ ನಡೆಯುವ ಕೆಡಿಪಿ ಸಭೆಗೆ ಬರದೆ ಇದ್ದರೇ ಹೇಗೆ? ಗ್ರಾಪಂ ಅಭಿವೃದ್ದಿ ಯಾವ ಮಟ್ಟದಲ್ಲಿ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕೂಡಲೇ ತಾಪಂ ಇಒ ಅವರಿಗೆ ಬೇಜವಾಬ್ದಾರಿ ಅಧಿಕಾರಿಗಳ ಬಗ್ಗೆ ವರದಿ ಸಲ್ಲಿಸಿ ಈ ಸಭೆಗೆ ಗೈರು ಹಾಜರಾದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ನೋಟೀಸ್ ನೀಡಿ ಎಂದು ಗ್ರಾಪಂ ಪಿಡಿಒ ಕೃಷ್ಣಮೂರ್ತಿ ಅವರಿಗೆ ಸೂಚನೆ ನೀಡಿದ್ದಾರೆ.
ಇನ್ನೂ ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲೂ ಶುದ್ದ ಕುಡಿಯುವ ನೀರು, ರಸ್ತೆ, ಚರಂಡಿ ವಿದ್ಯುತ್, ಸ್ವಚ್ಚತೆ ಸೇರಿದಂತೆ ಹಲವಾರು ಸೌಲಭ್ಯಗಳ ಕೊರತೆಯಾಗದ ರೀತಿಯಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ಬಳಿಕ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿ.ವೆಂಕಟೇಶ್ ಮಾತನಾಡಿ, ನಮ್ಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ನಂಜಿರೆಡ್ಡಿಪಲ್ಲಿ ಗ್ರಾಮದ ವಿದ್ಯಾರ್ಥಿನಿಯ ತಂದೆಯ ಆಧಾರ್ ನಂಬರ್ ಬರುತ್ತಿಲ್ಲ ವಾರ್ಷಿಕ ಪರೀಕ್ಷೆಗೆ ಕೂರಬೇಕಾದರೆ ಕಡ್ಡಾಯವಾಗಿ ತಂದೆ ತಾಯಿಗಳ ಆಧಾರ್ ನಂಬರ್ ಬೇಕೇ ಬೇಕು ಅದೊಂದು ಗ್ರಾಪಂನಿಂದ ಸಹಾಯವಾಗಬೇಕು ಎಂದು ಮನವಿ ಮಾಡಿದರು.
ನಂತರ ಸದದ್ಯ ರಾಜಾರೆಡ್ಡಿ ಮಾತನಾಡಿದರು, ತೋಟಗಾರಿಕೆ ಇಲಾಖೆಯ ಅಧಿಕಾರಿ ಶ್ರೀನಿವಾಸ, ಸಮಾಜ ಕಲ್ಯಾಣ ಇಲಾಖೆಯ ಕಲ್ಲಪ್ಪ, ಆರೊಗ್ಯ ಇಲಾಖೆಯ ಮೀನಾಕ್ಷಿ ತಮ್ಮ ತಮ್ಮ ಇಲಾಖೆಗಳ ಪ್ರಗತಿ ಯನ್ನು ಸಲ್ಲಿಸಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ಎಸ್.ಜಿ.ಶಂಕರನಾಯ್ಕ್, ಪಿಡಿಒ ಕೃಷ್ಣಮೂರ್ತಿ, ಕಾರ್ಯದರ್ಶಿ ಸಾಯಿ ಸಾತ್ವಿಕ್, ಸದಸ್ಯರಾದ ಆದಿನಾರಾಯಣಪ್ಪ, ಲಕ್ಷ್ಮೀಕಾಂತಮ್ಮ, ಕೃಷ್ಣಪ್ಪ, ಬಾಲರೆಡ್ಡಿ, ವೆಂಕಟರಾಯಪ್ಪ, ವೆಂಕಟರಾಮನಾಯ್ಕ್, ಕುಮದ್ವತಿ, ಶೋಭ ಗ್ರಾಪಂ ಸಿಬ್ಬಂದಿ ಹಾಜರಿದ್ದರು.



