ರಾಮನಗರ:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಪರೀಕ್ಷಾ ಶುಲ್ಕ ಪಾವತಿಸಲು ಅಧಿಸೂಚನೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2013-14, 2014-15 ಮತ್ತು 2018-19 ರಿಂದ 2021-22ನೇ (ಜುಲೈ/ಜನವರಿ ಆವೃತ್ತಿ) ಶೈಕ್ಷಣಿಕ ಸಾಲಿನ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷಗಳ ಬಿ.ಎ/ಬಿ.ಕಾಂ., ಸ್ನಾತಕ ಪದವಿಯ ಅನುತ್ತೀರ್ಣರಾಗಿರುವ/ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳು ಹಾಗೂ 2022-23ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದಿರುವ ಸ್ನಾತಕ ಪದವಿ ಬಿ.ಎ., ಬಿ.ಕಾಂ., ಮತ್ತು ಬಿ.ಲಿಬ್.ಐ.ಎಸ್ಸಿ, ವಾರ್ಷಿಕ ಕಾರ್ಯಕ್ರಮಗಳ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ.
2013-14, 2014-15, 2018-19 ಹಾಗೂ 2021-22 ನೇ ಶೈಕ್ಷಣಿಕ ಸಾಲಿನಲ್ಲಿ (ಜುಲೈ ಆವೃತ್ತಿ) ಪ್ರವೇಶಾತಿ ಪಡೆದಿರುವ ಪ್ರಥಮ ಹಾಗೂ ಅಂತಿಮ ವರ್ಷದ ಎಂ.ಎ/ಎA.ಕಾA., ವಾರ್ಷಿಕ ಕಾರ್ಯಕ್ರಮಗಳ ಅನುತ್ತೀರ್ಣರಾಗಿರುವ/ಪರೀಕ್ಷೆ ತೆಗೆದುಕೊಂಡಿಲ್ಲದ ಹಾಗೂ 2022-23 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರಥಮ ಮತ್ತು ಅಂತಿಮ ವರ್ಷದ ವಾರ್ಷಿಕ ಕೋರ್ಸ್ ವಿದ್ಯಾರ್ಥಿಗಳು, 2018-19 ನೇ ಶೈಕ್ಷಣಿಕ ಸಾಲಿನಿಂದ 2020-21 ನೇ ಸಾಲಿನವರೆಗೂ ಅನುತ್ತೀರ್ಣರಾಗಿರುವ/ಪರೀಕ್ಷೆ ತೆಗೆದುಕೊಂಡಿಲ್ಲದ ಎಂ.ಲಿಬ್.ಐ.ಎಸ್ಸಿ., ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ.
2020-21ನೇ (ಜುಲೈ/ಜನವರಿ ಆವೃತ್ತಿ) ಹಾಗೂ 2021-22 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯಲ್ಲಿ ಪ್ರವೇಶಾತಿ ಪಡೆದ ಸ್ನಾತಕ/ಸ್ನಾತಕೋತ್ತರ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ವಾರ್ಷಿಕ ಕಾರ್ಯಕ್ರಮಗಳ ಅನುತ್ತೀರ್ಣರಾಗಿರುವ/ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳು ಹಾಗೂ 2022-23 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ.
ಪರೀಕ್ಷಾ ಶುಲ್ಕ ಪಾವತಿಗೆ 2023ರ ಆಗಸ್ಟ್ 14 ದಂಡ ಶುಲ್ಕವಿಲ್ಲದೆ ಪಾವತಿಯ ಕಡೆಯ ದಿನಾಂಕ, ರೂ. 200/- ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಆಗಸ್ಟ್ 24 ಕೊನೆಯ ದಿನವಾಗಿದೆ. ಸದರಿ ಪರೀಕ್ಷೆಗಳನ್ನು 2023ರ ಸೆಪ್ಟೆಂಬರ್ 4ರಿಂದ ಪ್ರಾರಂಭಿಸಲಾಗುವುದು.
ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ www.ksoumysuru.ac.in ವೀಕ್ಷಿಸುವುದು ಹಾಗೂ ಆನ್ ಲೈನ್ ಸಹಾಯವಾಣಿ ಸಂಖ್ಯೆ: 8690544544/8800335638 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.