Friday, April 4, 2025
Google search engine

Homeರಾಜ್ಯಸುದ್ದಿಜಾಲವಿದ್ಯಾರ್ಥಿ ದಿಸೆಯಲ್ಲಿ ನಾಯಕತ್ವ ಗುಣ ಮತ್ತು ಸೇವ ಮನೋಭಾವನೆ ಕಲಿಯಲು NSS ಶಿಬಿರ ಸಹಕಾರಿ- ಎಸ್.ಜಯ...

ವಿದ್ಯಾರ್ಥಿ ದಿಸೆಯಲ್ಲಿ ನಾಯಕತ್ವ ಗುಣ ಮತ್ತು ಸೇವ ಮನೋಭಾವನೆ ಕಲಿಯಲು NSS ಶಿಬಿರ ಸಹಕಾರಿ- ಎಸ್.ಜಯ ಅಭಿಪ್ರಾಯ

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ವಿದ್ಯಾರ್ಥಿಗಳ ದಿಸೆಯಲ್ಲಿ ನಾಯಕತ್ವ ಗುಣ ಮತ್ತು ಸೇವ ಮನೋಭಾವನೆಯನ್ನು ಕಲಿಯಲು ಎನ್.ಎಸ್.ಯೋಜನಾ ಶಿಬಿರಗಳು ಸಹಕಾರಿಯಾಗಲಿವೆ ಎಂದು ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ‌ ಪ್ರಾಂಶುಪಾಲಬಿ.ಎಸ್.ಜಯ ಅಭಿಪ್ರಾಯ ಪಟ್ಟರು.

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಶಿಬಿರಗಳಲ್ಲಿ ಭಾಗವಹಿಸಿದರೇ ಪ್ರಸುತ್ತ ಸಮಾಜದಲ್ಲಿ ವಿದ್ಯಾರ್ಥಿಗಳಲ್ಲಿ ಮೇಲು-ಕೀಳು ಎಂಬದನ್ನು ದೂರಮಾಡಿ ಗ್ರಾಮೀಣ ಭಾಗದ ಸಮಸ್ಯೆಗಳನ್ನು‌ಅರಿತು ಕೊಂಡು ಇಲ್ಲಿನ ಸಂಸ್ಕೃತಿಯನ್ನು‌ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಉಪನ್ಯಾಸಕರಾದ ವರದರಾಜು, ಶಂಕರ್, ದೈಹಿಕ ಶಿಕ್ಷಕ ನಿಸಾರ್ ಖಾನ್, ಎನ್.ಎಸ್.ಎಸ್ ಶಿಭಿರದ ಉದ್ದೇಶ ಮತ್ತು ಇಲ್ಲಿ ವಿದ್ಯಾರ್ಥಿಗಳು ಕಲಿಯ ಬೇಕಾದ ಶಿಸ್ತು ಬದ್ದ ಜೀವನದ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಉಪ ತಶೀಲ್ದಾರ್ ಶರತ್, ಶ್ರೀರಾಮ‌ದೇವಾಲಯದ ಪಾರುಪತ್ತೆದಾರ್ ಯತೀರಾಜ್, ಕಾಲೇಜಿನ ಉಪನ್ಯಾಸಕರಾದ ದಯಾನಂದ, ನಿಸಾರ್ ಖಾನ್, ಸಿದ್ದ ಮಹಾದೇವ, ಸಂಯೋಜಕರಾದ ಎಂ.ವಿ‌. ರಾಘವೇಂದ್ರ, ಮಮತಾ, ಮೂಲೆಪೆಟ್ಲು ಪ್ರದೀಪ್, ಸಾಗರ್, ವಂದನ ಸೇರಿದಂತೆ ಮತ್ತಿತತರು ಹಾಜರಿದ್ದರು.

RELATED ARTICLES
- Advertisment -
Google search engine

Most Popular