ಬೆಂಗಳೂರು: ರಾಜ್ಯದಾದ್ಯಂತ ಹಠಾತ್ ಹೃದಯಾಘಾತದಿಂದ ಸಂಭವಿಸಿದ ಸರಣಿ ಸಾವಿನ ಬಳಿಕ, ಕರ್ನಾಟಕ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ರಚಿಸಿ, ಹೃದಯಾಘಾತ ಹೆಚ್ಚಳದ ಕಾರಣಗಳನ್ನು ಅಧ್ಯಯನ ಮಾಡಲಾಗಿದೆ. ಸಮಿತಿ 251 ಜನ ಹೃದ್ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿ ತಯಾರಿಸಿದ ಪೂರ್ವವಾರ್ಧ ವರದಿಯನ್ನು ಈಗ ಸರ್ಕಾರಕ್ಕೆ ಸಲ್ಲಿಸಿದೆ.
ಅಧ್ಯಯನದಲ್ಲಿ 30 ವರ್ಷಕ್ಕಿಂತ ಕಡಿಮೆ, 31-40 ಮತ್ತು 41-45 ವಯೋಮಿತಿಯ 251 ಜನರನ್ನು ಒಳಪಡಿಸಲಾಗಿದ್ದು, ಇದರಲ್ಲಿ 218 ಪುರುಷರು ಹಾಗೂ 33 ಮಹಿಳೆಯರು ಸೇರಿದ್ದಾರೆ. 87 ಮಂದಿಗೆ ಮಧುಮೇಹ, 102 ಮಂದಿಗೆ ರಕ್ತದೊತ್ತಡ, 35 ಮಂದಿಗೆ ಕೊಲೆಸ್ಟ್ರಾಲ್, 40 ಮಂದಿಗೆ ಹೃದಯ ಸಂಬಂಧಿತ ಕಾಯಿಲೆ, 111 ಜನರು ಧೂಮಪಾನಿ, 19 ಜನರಿಗೆ ಕೊವಿಡ್ ಸೋಂಕಿನ ಇತಿಹಾಸವಿದೆ. 77 ಮಂದಿಗೆ ಯಾವುದೇ ಪೂರ್ವರೋಗಗಳಿಲ್ಲ.
ಸದ್ಯ ನ್ಯೂರಾಲಜಿಕಲ್ ಅಂಶಗಳ ಅಧ್ಯಯನಕ್ಕಾಗಿ ನಿಮ್ಹಾನ್ಸ್ ತಜ್ಞರ ಅಂತಿಮ ವರದಿ ಕಾಯಲಾಗುತ್ತಿದೆ.