Sunday, April 20, 2025
Google search engine

Homeರಾಜ್ಯಸುದ್ದಿಜಾಲಕ್ಷಯರೋಗಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಮುಖ್ಯ: ಡಾ. ಕೆ.ಕುಮಾರ್

ಕ್ಷಯರೋಗಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಮುಖ್ಯ: ಡಾ. ಕೆ.ಕುಮಾರ್

ರಾಮನಗರ: ಕ್ಷಯರೋಗಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಅತಿ ಅತ್ಯಗತ್ಯವಾಗಿದೆ ಎಂದು ಜಿಲ್ಲಾಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಕುಮಾರ್ ಕೆ ಅವರು ತಿಳಿಸಿದರು.

ಅವರು ನ. ೨೧ರ ಇಂದು ಮಂಗಳವಾರ ರಾಮನಗರಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಚೇರಿ ಹಾಗೂ ರಾಮನಗರ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಕ್ಷಯರೋಗಿಗಳಿಗೆ ಉಚಿತವಾಗಿ ಪೌಷ್ಟಿಕಾಂಶಯುಕ್ತ ಆಹಾರ ಕಿಟ್‌ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನ ಮಂತ್ರಿಯವರ ಟಿ.ಬಿ ಮುಕ್ತ ಭಾರತ್ ನಿಕ್ಷಯ್ ಮಿತ್ರಯೋಜನೆಯಡಿಯಲ್ಲಿ ಕ್ಷಯರೋಗಿಗಳಿಗೆ ಚಿಕಿತ್ಸೆಯಜೊತೆಯಲ್ಲಿಆರೋಗ್ಯ ವೃದ್ದಿಸುವಲ್ಲಿ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಕ್ಷಯರೋಗಿಗೆ ಚಿಕಿತ್ಸಾ ಅವಧಿಯಲ್ಲಿ ಪ್ರತೀ ಮಾಹೆ ೫೦೦ ರೂಗಳ ಸಹಾಯಧನವನ್ನು ಅವರ ಉಳಿತಾಯ ಖಾತೆಗೆರವಾನೆ ಮಾಡಲಾಗುತ್ತಿದೆಎಂದು ತಿಳಿಸಿದರು.

ಡಿಎಂಒಡಾ. ಶಶಿಧರ್,ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್ ಬಿ.ಎಸ್, ರಾಮನಗರಜಿಲ್ಲಾ ಭಾರತೀಯರೆಡ್‌ ಕ್ರಾಸ್ ಸಂಸ್ಥೆಯಜಿಲ್ಲಾಧ್ಯಕ್ಷರಾದ ಶೇಷಾದ್ರಿಅಯ್ಯರ್, ಸಭಾಪತಿ ಬಾಲಕೃಷ್ಣ, ಪ್ರಧಾನಕಾರ್ಯದರ್ಶಿ ಎಸ್. ರುದ್ರೇಶ್ವರ, ಖಜಾಂಚಿ ಪರಮಶಿವಯ್ಯ, ಸದಸ್ಯ ಚಂದ್ರಶೇಖರಯ್ಯ, ಸಕ್ಬತ್‌ಉಲ್ಲಖಾನ್,ಶಂಕರಯ್ಯ, ಮಧುಸೂದನ್, ಸಂಜಯ, ನರೇಂದ್ರ, ಶಾರದ, ಮೇಲ್ವಿಚಾರಕರಾದಕೃಷ್ಣೇಗೌಡ, ಶಿವನಂಜಯ್ಯ, ತೇಜಸ್‌ಕುಮಾರ್ ಹಾಗೂ ಫಲಾನುಭವಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular