Monday, July 28, 2025
Google search engine

Homeರಾಜ್ಯನಟಿ ರಮ್ಯಾಗೆ ಅಶ್ಲೀಲ ಮೆಸೇಜ್ : ಸ್ವಯಂಪ್ರೇರಿತ ದೂರು ದಾಖಲಿಸಲು ಮುಂದಾದ ಮಹಿಳಾ ಆಯೋಗ

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ : ಸ್ವಯಂಪ್ರೇರಿತ ದೂರು ದಾಖಲಿಸಲು ಮುಂದಾದ ಮಹಿಳಾ ಆಯೋಗ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಮ್ಯಾಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಮೆಸೇಜ್‌ಗಳು ಬರುತ್ತಿರುವ ಕುರಿತು ಮಹಿಳಾ ಆಯೋಗ ಸ್ಪಂದಿಸಿದೆ. ಸ್ವಯಂಪ್ರೇರಿತ ದೂರು ದಾಖಲಿಸಲು ಆಯೋಗ ಮುಂದಾಗಿದ್ದು, ತಕ್ಷಣವೇ ಪೊಲೀಸ್ ಕಮೀಷನರ್ಗೆ ಪತ್ರ ಬರೆಯಲು ನಿರ್ಧರಿಸಿದೆ.

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಈ ಕುರಿತು ಮಾತನಾಡುತ್ತಾ, “ಇಂಥ ಅಶ್ಲೀಲ ಸಂದೇಶಗಳು ಕೇವಲ ರಮ್ಯಾಗೆ ಮಾತ್ರವಲ್ಲ, ಹಲವಾರು ಮಹಿಳಾ ಸೆಲೆಬ್ರಿಟಿಗಳಿಗೆ ಬರುತ್ತಿವೆ. ಯಾರಿಗೂ ಅವಮಾನವಾಗುವ ಪದಬಳಕೆ ಮಾಡಬಾರದು. ಈ ಕೃತ್ಯವು ಕಾನೂನಿನ ಪ್ರಕಾರ ಗಂಭೀರ ಅಪರಾಧ. ಆರೋಪ ಸಾಬೀತಾದರೆ 3 ರಿಂದ 7 ವರ್ಷ ಜೈಲು ಶಿಕ್ಷೆ ಸಾಧ್ಯ,” ಎಂದು ಎಚ್ಚರಿಸಿದರು.

ನಟಿ ರಮ್ಯಾ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕುಟುಂಬದ ಪರ ನಿಂತ ಹಿನ್ನೆಲೆ, ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಅಶ್ಲೀಲ ಸಂದೇಶಗಳ ಮೂಲಕ ಅವಮಾನಿಸುತ್ತಿರುವುದು ಕಂಡುಬಂದಿದ್ದು, ರಮ್ಯಾ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಶ್ಲೀಲ ಕಮೆಂಟ್ ಮಾಡಿದವರ ಅಕೌಂಟ್‌ಗಳನ್ನು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದು, ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಸೂಚನೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ ಮಾನಹಾನಿ ಕೃತ್ಯಗಳಿಗೆ ಗಂಭೀರ ಶಿಕ್ಷೆಗಳಿವೆ ಎಂಬ ಅರಿವು ಬಹುತೇಕ ಜನರಿಗೆ ಇಲ್ಲ. ಮಹಿಳಾ ಆಯೋಗ ಇಂತಹ ಕೃತ್ಯಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸಿದ್ಧವಾಗಿದೆ.

RELATED ARTICLES
- Advertisment -
Google search engine

Most Popular