ಹೊಸೂರು : ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲೂಕು ನಾಯಕ ಹಾಗೂ ನೌಕರರ ಸಂಘದ ವತಿಯಿಂದ ಶಾಸಕರಾದ ಡಿ.ರವಿಶಂಕರ್ ಹಾಗೂ ಅನಿಲ್ ಚಿಕ್ಕಮಾದನಾಯಕ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ನಾಯಕ ಸಂಘದ ಅಧ್ಯಕ್ಷ ನರಸಿಂಹ ನಾಯಕ ಹೇಳಿದರು.
ಚುಂಚನಕಟ್ಟೆ ಗ್ರಾಮದಲ್ಲಿ ನಡೆದ ನಾಯಕ ಸಮುದಾಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕೆ.ಆರ್.ನಗರದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಅ.8ರ ಭಾನುವಾರ ಬೆಳಗ್ಗೆ 10 ಘಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶಾಸಕ ಡಿ.ರವಿಶಂಕರ್ ವಹಿಸಲಿದ್ದು, ಶಾಸಕ ಅನಿಲ್ ಚಿಕ್ಕಮಾದನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಈ ಕಾರ್ಯಕ್ರಮಕ್ಕೆ ತಾಲೂಕಿನ ನಾಯಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪರಮೇಶ್ ನಾಯಕ್, ನಿರ್ದೇಶಕ ದೇವರಾಜು, ನಗರಾಜನಾಯಕ, ಶ್ರೀನಿವಾಸ್, ತೋಟಪ್ಪ ನಾಯಕ, ಅಣ್ಣಜಿ ನಾಯಕ, ಯುವ ಮುಖಂಡ ಚುಂಚನಕಟ್ಟೆ ಮಣಿಕಂಠ, ತಂದ್ರೆ ಗಿರೀಶ್ ಸೇರಿದಂತೆ ಮತ್ತಿತರು ಇದ್ದರು.