Friday, April 11, 2025
Google search engine

Homeಕ್ರೀಡೆಕೇರಳದಲ್ಲೂ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಗಳು

ಕೇರಳದಲ್ಲೂ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಗಳು

ತಿರುವನಂತಪುರಂ: ಈ ಬಾರಿ ಅಕ್ಟೋಬರ್‌-ನವೆಂಬರ್‌ ನಲ್ಲಿ ಭಾರತ ಏಕದಿನ ವಿಶ್ವಕಪ್‌ನ ಆತಿಥ್ಯ ವಹಿಸಲಿದೆ. ಬಿಸಿಸಿಐ ಏಕಾಂಗಿಯಾಗಿ ಕೂಟವನ್ನು ಆಯೋಜಿಸುತ್ತಿರುವುದರಿಂದ ಕೂಟ ಅತ್ಯಂತ ಮಹತ್ವ ಪಡೆದು ಕೊಂಡಿದೆ. ಇಂತಹ ಹೊತ್ತಿನಲ್ಲಿ ಕೇರಳದ ಕ್ರಿಕೆಟ್‌ ಅಭಿಮಾನಿಗಳಿಗೆ ಅತ್ಯಂತ ಸಂತೋಷದ ಸುದ್ದಿ ಲಭಿಸಿದೆ.

ತಿರುವನಂತಪುರಂ ಗ್ರೀನ್‌ ಫೀಲ್ಡ್‌ ಮೈದಾನದಲ್ಲಿ ಮೂರು ಪಂದ್ಯಗಳು ನಡೆಯುವುದು ಬಹುತೇಕ ಖಾತ್ರಿಯಾಗಿದೆ. ಹಾಗಂತ ಅವರಿಗೆ ಪೂರ್ಣ ಸಂಭ್ರಮಪಡಲು ಅವಕಾಶವಿಲ್ಲ. ಭಾರತದ ಯಾವುದೇ ಪಂದ್ಯಗಳು ನಡೆಯುವ ಸಾಧ್ಯತೆ ಶೇ.99 ಇಲ್ಲ.

ತಿರುವನಂತಪುರಂ ಮೈದಾನದಲ್ಲಿ ಶ್ರೀಲಂಕಾದ ಒಂದು ಪಂದ್ಯ ನಡೆಯಬಹುದು. ಇನ್ನೆರಡು ಇತರೆ ದೇಶಗಳ ಪಂದ್ಯಗಳು ನಡೆಯಲಿವೆ. ಈ ಬಗ್ಗೆ ಎಲ್ಲವೂ ಅಧಿಕೃತವಾಗಿದ್ದರೂ ಐಸಿಸಿ ವಿಶ್ವಕಪ್‌ನ ವೇಳಾಪಟ್ಟಿಯನ್ನು ಅಧಿಕೃತಗೊಳಿಸಿದ ಮೇಲಷ್ಟೇ ಎಲ್ಲವೂ ಅಂತಿಮಗೊಳ್ಳಲಿದೆ. ಅಂದರೆ ಔಪಚಾರಿಕ ವಿಧಿವಿಧಾನಗಳಷ್ಟೇ ಬಾಕಿಯಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಜಯೇಶ್‌ ಜಾರ್ಜ್‌, ನಾವು ಬಿಸಿಸಿಐಗೆ ಮನವಿ ಮಾಡಿದ್ದೇವೆ. ಕೆಲವು ಪಂದ್ಯಗಳು ನಮಗೆ ಸಿಗುವ ನಂಬಿಕೆಯೂ ಇದೆ. ಆದರೆ ಬಿಸಿಸಿಐನಿಂದ ಇನ್ನೂ ನಮಗೆ ಅಧಿಕೃತವಾಗಿ ಖಾತ್ರಿ ಸಿಕ್ಕಿಲ್ಲ ಎಂದಿದ್ದಾರೆ.

ಕೇರಳದಲ್ಲಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳು ನಡೆಯುವುದು ಅಷ್ಟೇನು ಮಹತ್ವದ ಸಂಗತಿ ಎಂದು ನೀವು ಪ್ರಶ್ನಿಸುತ್ತೀರಾ? ಮಹತ್ವವಿದೆ. ಭಾರತ ಇದುವರೆಗೆ ಮೂರು ಬಾರಿ ವಿಶ್ವಕಪ್‌ ಆತಿಥ್ಯ ವಹಿಸಿದೆ. 1987, 1996 ಮತ್ತು 2011ರಂದು. ಅಷ್ಟೂ ಬಾರಿ ಜಂಟಿ ಆತಿಥ್ಯದಲ್ಲೇ ನಡೆದಿದ್ದು. ಈ ಕಾರಣಕ್ಕೆ ಕೇರಳ ಒಮ್ಮೆಯೂ ವಿಶ್ವಕಪ್‌ ಪಂದ್ಯವನ್ನಾಯೋಜಿಸುವ ಅವಕಾಶ ಸಿಕ್ಕಿಲ್ಲ

RELATED ARTICLES
- Advertisment -
Google search engine

Most Popular