ಮೈಸೂರು: ನ. 17ಕ್ಕೆ ಪಾಲಿಕೆ ಸದಸ್ಯರ ಅವಧಿ ಅಂತ್ಯವಾಗಲಿದ್ದು, ಬಳಿಕ ಶೀಘ್ರದಲ್ಲೇ ಪಾಲಿಕೆಗೆ ಚುನಾವಣೆ ನಡೆಸುವ ಬಗ್ಗೆ ಎಲ್ಲ ಸಿದ್ಧತೆ ಭರದಿಂದ ಸಾಗಿವೆ. ಈ ಬಾರಿ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಪಡೆಯಬೇಕೆಂಬ ನಿಟ್ಟಿನಲ್ಲಿ ಎಲ್ಲ ರೀತಿಯ ತಂತ್ರಗಾರಿಕೆ ಆರಂಭವಾಗಿವೆ. ಈ ಬಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಸ್ಥಳೀಯ ಮುಖಂಡರು ಹಾಗೂ ಪಕ್ಷದ ಜನ ಪ್ರತಿನಿಧಿಗಳ ಸಭೆ ಕರೆದು ಅಭಿಪ್ರಾಯ ಕೇಳಲಾಗಿದೆ.
ಇದೇ ವೇಳೆ, ಕಳೆದ ಚುನಾವಣೆಯಲ್ಲಿ ಮೀಸಲು ಸ್ಥಾನದಿಂದಜಯ ಗಳಿಸಿದ್ದವರು ಮೀಸಲು ಕಳೆದುಕೊಳ್ಳಲಿದ್ದಾರೆ, ಮೀಸಲು ಅಥವಾ ಮಹಿಳಾ ಮೀಸಲು ಸ್ಥಾನ ಸಾಮಾನ್ಯವಾಗಬಹುದಾಗಿದೆ. ಜನವರಿ ಮೊದಲ ವಾರದಲ್ಲಿ ಚುನಾವಣೆ ಪ್ರಕಟವಾಗಬಹುದಾಗಿದೆ ಎನ್ನಲಾಗಿದ್ದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸಹಾ ನಿಗದಿತ ಸಮಯಕ್ಕೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.