ಹೊಸೂರು : ತಾವು ನಿರ್ವಹಿಸುತ್ತಿರುವ ಹುದ್ದೆಯಿಂದ ಇನ್ನೊಂದು ಹುದ್ದೆಗೆ ಬಡ್ತಿ ಸಿಗುತ್ತದೆ ಎಂದು ಕಾದು ಕುಳಿತ ಗ್ರಾ.ಪಂ. ಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಬಡ್ತಿ ಭಾಗ್ಯ ಸಿಗದೇ ಭಡ್ತಿಗಾಗಿ ಜಾತಕ ಪಕ್ಷಿಗಳಂತೆ ಕಾಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ
ಮೈಸೂರು ಜಿಲ್ಲಾಪಂಚಾಯಿತಿ ವ್ಯಾಪ್ತಿಗೆ ಸುಮಾರು ೯ ತಾಲೂಕುಗಳ ಗ್ರಾಮಪಂಚಾಯಿತಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ೧೨ ವರ್ಷಗಳಿಂದ ಭಡ್ತಿ ಭಾಗ್ಯ ಸಿಗದೇ ಇರುವ ಹುದ್ದೆಗಳಲ್ಲಿಯೇ ನಿತ್ಯ ಕಾಲದೂಡುವಂತೆ ಆಗಿದೆ. ಜಿಲ್ಲೆಯಲ್ಲಿ ೨೩೪ಗ್ರಾಮ ಪಂಚಾಯಿತಿಗಳಿದ್ದು ಹಲವು ಗ್ರಾಮಪಂಚಾಯಿತಿ ಗಳಲ್ಲಿ ಗ್ರೇಡ್ ೧ ಗ್ರೇಡ್ ೨ ಕಾರ್ಯದರ್ಶಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಜೇಷ್ಠತಾ ಪಟ್ಟಿ ತಯಾರಿಸಿ ಪದೋನ್ನತಿ ನೀಡಬೇಕಾಗಿದ್ದರು ಸಹ ಈ ಕೆಲಸ ಆಗದೇ ನಿರ್ಲಕ್ಷ ವಹಿಸಿರುವುದು ಬಡ್ತಿಗಾಗಿ ಕಾದವರ ಆಸೆಗೆ ತಣ್ಣಿರು ಎರಚಿದೆ. ಇದರ ಜತಗೆ ಗ್ರಾಮಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್, ಕ್ಲಾಕ್ ಡಾಟಾ ಎಂಟ್ರಿ ಆಪರೇಟರ್ ಗಳ ಜೆಷ್ಟತಾ ಪಟ್ಟಿಯು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಬೇಕಿದ್ದರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಇದರಿಂದ ಇನ್ನು ಎಷ್ಟು ದಿವಸ ಬಡ್ತಿಗಾಗಿ ಕಾಯಬೇಕು ಎನ್ನುವಂತಾಗಿದೆ ಇವರ ಸ್ಥಿತಿ ಪ್ರತಿವರ್ಷವೂ ಜೇಷ್ಠತಾ ಪಟ್ಟಿ ತಯಾರಿಸಿ ಗ್ರಾಮಪಂಚಾಯಿತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪದೋನ್ನತಿ ನೀಡಬೇಕೆಂಬುದು ನಿಯಮ ಇದೆ ಆದರು ಕೂಡ ಮೈಸೂರು ಜಿ.ಪಂ.ಅಧಿಕಾರಿಗಳು ಇವರುಗಳಿಗೆ ಕ್ರಮವಹಿಸಿ ಬಡ್ತಿಯೇ ನೀಡದಿರುವುದು ನಿಜಕ್ಕೂ ವಿಪರ್ಯಾಸವೇಸರಿ.
ಪ್ರತಿವರ್ಷ ಜಿ.ಪಂ. ಸಿಇಓ ಅವರು ಜಿಲ್ಲಾ ಬಡ್ತಿ ಸಮಿತಿಯ ಸಭೆ ನಡೆಸಿ ಬಡ್ತಿ ನೀಡಬಹುದು ಅದರೆ ಈ ತಿರ್ಮಾನ ಕೈಗೊಳ್ಳಲು ಮುಂದಾಗದೇ ಇರುವ ಪರಿಣಾಮವಾಗಿ ಬಡ್ತಿಯೇ ಇಲ್ಲದೇ ಗ್ರಾಮಪಂಚಾಯಿತಿಯಿಂದ ಕೆಲವರು ನಿವೃತ್ತಿ ಆಗುವಂತೆ ಅದರೆ ಇನ್ನು ಕೆಲವರು ನಿವೃತ್ತಿ ಅಂಚಿಗೆ ಬಂದು ತಲುಪುವಂತೆ ಆಗಿದೆ
ಸರ್ಕಾರ ಬಡ್ತಿ ನೀಡಲು ಹೊರಡಿಸಿರುವ ಅಧಿಸೂಚನೆ, ಬೇರೆ ಬೇರೆ ಜಿಲ್ಲೆಗಳಲ್ಲಿ ಆಗಿರುವ ಕ್ರಮಗಳು ಇತ್ಯಾದಿಯ ಬಗ್ಗೆ ದಾಖಲೆ ಸಮೇತ ಜಿಲ್ಲಾಪಂಚಾಯಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಬಡ್ತಿಗೆ ಕ್ರಮ ಕೈಗೊಂಡಿಲ್ಲ ಜತಗೆ ಶಾಸಕರು, ಸಂಸದರು ತಮ್ಮ ನೆರವಿಗೆ ಬರುತ್ತಿಲ್ಲ ಎಂಬುದು ಬಡ್ತಿ ವಂಚಿತ ಅಧಿಕಾರಿ ಮತ್ತು ಸಿಬ್ಬಂದಿಗಳ ಆಳಲಾಗಿದೆ
ಮುಖ್ಯಮಂತ್ರಿಗಳು ಗಮನ ಹರಿಸಲಿ: ನಮಗೆ ಭಡ್ತಿ ಸಿಗದೇ ಇರುವ ಜಿ.ಪಂ.ಸದಸ್ಯರ ಗಮನಕ್ಕೆ ತಂದು ಜಿ.ಪಂ. ಸಿಇಓ ಅವರ ಮೇಲೆ ಒತ್ತಡ ಹೆರಲು ಮುಂದಾಗೋಣ ಎಂದರೆ ಜಿ.ಪಂ.ಸದಸ್ಯರ ಚುನಾವವಣೆ ನಡೆದಿಲ್ಲ , ಭಡ್ತಿ ಪಡೆದರೆ ಸಂಬಳ ಹೆಚ್ಚಳ ಆಗುತ್ತದೆ ಅದು ಆಗದಂತೆ ಆಗಿದೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ತವರು ಜಿಲ್ಲೆಯ ಗ್ರಾ.ಪಂ.ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಭಡ್ತಿ ನೀಡಲು ಜಿ.ಪಂ.ಸಿಇಓ ಅವರಿಗೆ ಸೂಚಿಸಲಿ ಎಂಬುದು ಗ್ರಾ.ಪಂ.ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮನವಿ ಆಗಿದೆ.