ಧಾರವಾಡ : ಎಲ್ಲ ಇಲಾಖೆಗಳ ಪ್ರಗತಿಗಳನ್ನು ಪರಿಶೀಲಿಸಲಾಗಿ ಅಧಿಕಾರಿಗಳು ತಮ್ಮ ಇಲಾಖೆಯ ದಿನನಿತ್ಯದ ಕಾರ್ಯಗಳಿಗೆ ಮಾತ್ರ ಸೀಮತವಾಗಿರುವಂತೆ ಕಾಣುತ್ತಿದೆ. ಜಿಲ್ಲೆಯ ಅಭಿವೃದ್ದಿಗೆ ಎಲ್ಲರು ಕಳಕಳಿ, ಪ್ರಜ್ಞಾವಂತಿಕೆ ತರಿಸಬೇಕು. ವೃತ್ತಿಯಲ್ಲಿ ಸಾಮಾಜಿಕ ಪ್ರಜ್ಞೆ, ಆತ್ಮತೃಪ್ತಿ ಮತ್ತು ಸಾಮಾಜಿಕ ನ್ಯಾಯ ಇರುವಂತೆ ಕರ್ತವ್ಯ ನಿರ್ವಹಿಸಬೇಕು. ಅಂದಾಗ ಸರಕಾರದ ಜನಪರ ಯೋಜನೆಗಳು ಅರ್ಹರಿಗೆ ತಲುಪಲು ಸಾಧ್ಯವಿದೆ ಎಂದು ಕಾರ್ಮಿಕ ಇಲಾಖೆ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ 2023-24 ನೇ ಸಾಲಿನ ಡಿಸೆಂಬರ್ 2023 ರ ಅಂತ್ಯಕ್ಕೆ ಕೊನೆಗೊಂಡಿರುವ 3 ನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಜಿಲ್ಲೆಯ ಅಭಿವೃದ್ದಿಗೆ ಮೂಲಭೂತವಾಗಿ ಅಗತ್ಯವಿರುವ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಕುಡಿಯುವ ನೀರು, ಕೃಷಿ, ತೋಟಗಾರಿಕೆ ಮತ್ತು ನಗರಾಭಿವೃದ್ದಿ ಯೋಜನೆಗಳಲ್ಲಿ ಜಿಲ್ಲೆಯ ಸಚಿವರನ್ನು, ಶಾಸಕರನ್ನು ಮತ್ತು ವಿವಿಧ ಜನಪ್ರತಿನಿಧಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೆಕು. ಅಧಿಕಾರಿಗಳು ತಮಗೆ ತಿಳದಂತೆ ಕಾರ್ಯಕ್ರಮ ರೂಪಿಸಿದರೆ ಸಾಲದು. ಎಲ್ಲರ ಅಭಿಪ್ರಾಯ ಪಡೆಯಬೇಕು. ಪ್ರತಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮತ್ತು ಆಯಾ ಕ್ಷೇತ್ರದ ಶಾಸಕರಿಗೆ ಪ್ರತಿ ತಿಂಗಳು ತಮ್ಮ ಇಲಾಖೆ ಯೋಜನೆ ಕಾಮಗಾರಿಗಳ ಮಾಹಿತಿ ಸಲ್ಲಿಸಬೇಕು. ಇದರಿಂದ ಕಾಮಗಾರಿ, ಯೋಜನೆಗಳಿಗೆ ಯಾವುದೇ ತಾಂತ್ರಿಕ ಅಡಚಣೆ ಆಗದಂತೆ ಮತ್ತು ಅನುಮೊದನೆ, ಅನುದಾನ ವಿಳಂಬವಾಗದಂತೆ ಜನಪ್ರತಿನಿಧಿಗಳು ಮುನ್ನೆಚ್ಚರಿಕೆ ವಹಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಅಧಿಕಾರಿಗಳು, ತಮ್ಮ ಇಲಾಖೆಯ ಅಗತ್ಯತೆಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದಿರಬೇಕು. ಅನುμÁ್ಠನಗೊಳಿಸಲು ಸಾಧ್ಯವಿರುವ ಸಲಹೆ, ಪ್ರಸ್ತಾವನೆಗಳನ್ನು ನೀಡಬೇಕು. ಭೌತಿಕ ಕಾಮಗಾರಿ, ಕಟ್ಟಡಗಳಿಗೆ ಆದ್ಯತೆ ನೀಡದೆ, ಇರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮಗ್ರವಾದ ಅಭಿವೃದ್ದಿಗೆ ಶ್ರಮಿಸಬೇಕು. ಅಧಿಕಾರಿಗಳು ತಾವಾಗಿಯೇ, ಕಾನ್ಸಿಯಸ್ ಆಗಿ ಕಾರ್ಯನಿರ್ವಹಿಸಬೇಕು ಎಂದರು. ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಕಡಿಮೆ ಹಂತದಲ್ಲಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಡೈಯಟ್ ಸೇರಿ ಸಂಯುಕ್ತವಾಗಿ ಜಿಲ್ಲೆಯಲ್ಲಿ ಶಿಕ್ಷಣ ಸುಧಾರಣೆಗೆ ನೀಲನಕ್ಷೆ ರೂಪಿಸಬೇಕು ಎಂದರು.
ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆ, ಮಹಿಳೆಯರ ಉದ್ಯೋಗ, ಆರ್ಥಿಕ ಅಭಿವೃದ್ದಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಲಿಂಗಾನುಪಾತ ಕಡಿಮೆ ಆಗಿದ್ದು, ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿ ಬಾಲ್ಯವಿವಾಹ, ಮಕ್ಕಳ ನಾಪತ್ತೆ, ಲೈಂಗಿಕ ದೌರ್ಜನ್ಯಗಳ ಕುರಿತು ಮಕ್ಕಳಲ್ಲಿ, ಪಾಲಕರಲ್ಲಿ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳಲ್ಲಿ ನೈತಿಕ ಶಿಕ್ಷಣ ನೀಡಲು ಕ್ರಮವಹಿಸಬೇಕು ಎಂದರು. ಅರಣ್ಯ ಇಲಾಖೆಯ ಕಾರ್ಯಕ್ರಮಗಳು ಸರಿಯಾಗಿ ಅನುμÁ್ಠನವಾಗಬೇಕು. ಅಧಿಕಾರಿಗಳು ಅರಣ್ಯ ಕಾಯ್ದೆಗಳ ಬಗ್ಗೆ ಸೂಕ್ತ ತಿಳುವಳಿಕೆ ಪಡೆದುಕೊಳ್ಳಬೇಕು. ಅರಣ್ಯ ಹೆಚ್ಚಳಕ್ಕೆ ವಿವಿಧ ಯೋಜನೆಗಳಡಿ ಕ್ರಮ ವಹಿಸಬೇಕು ಎಂದು ಸಚಿವರು ಹೇಳಿದರು.
ಜಿಲ್ಲೆಯ ಯಾವುದೇ ಭಾಗದಲ್ಲಿ ಪಶು ಆಹಾರ ಕೊರತೆ ಆದರೆ ಅಧಿಕಾರಿಯನ್ನೆ ಹೊಣೆ ಮಾಡಲಾಗುತ್ತದೆ. ಪಶುಗಳ ಸಂಖ್ಯೆ, ರೈತರ ಸಂಖ್ಯೆ ಪರಿಗಣಿಸಿ, ಸರಿಯಾಗಿ ಕೆಲಸ ಮಾಡಲು ಸಚಿವರು ಸೂಚಿಸಿದರು. ರೈತರಿಗೆ ಸಕಾಲಕ್ಕೆ ದನಗಳ ಮೇವು, ಚಿಕಿತ್ಸೆ ಮತ್ತು ಅಗತ್ಯ ಸೌಲಭ್ಯ ಸೀಗುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಸಚಿವರು ಹೇಳಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣಕುಮಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಬೆಳೆ ಹಾನಿ ಆಗಿದ್ದು, ಪರಿಹಾರ ಬಿಡುಗಡೆಗೆ ಸರಕಾರ ಕ್ರಮಕೈಗೊಳ್ಳುತ್ತಿದೆ. ಹಿಂಗಾರು ಬೆಳೆ ಕುಂಠಿತವಾಗಿದ್ದು, ಈಗಾಗಲೇ ಹಿಂಗಾರು ಬೇಳೆ ಸಮೀಕ್ಷೆ ಮಾಡಲಾಗಿದ್ದು, ಬೆಳೆ ಕಟಾವು ಅಂತಿಮ ಹಂತದಲ್ಲಿದೆ ಎಂದು ಅವರು ಹೇಳಿದರು.
2023-24 ನೇ ಸಾಲಿನ ಬೆಳೆ ವಿಮೆ ಮಾಡಿಸಿದ್ದ ರೈತರಿಗೆ ವಿವಿಧ ಬೆಳೆಗಳಿಗೆ ಮದ್ಯಂತರ ಪರಿಹಾರವಾಗಿ 64.03 ಕೋಟಿ ರೂ.ಗಳನ್ನು ಸುಮಾರು 88.272 ರೈತರಿಗೆ ಬಿಡುಗಡೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ಸಿ.ಬದ್ರಣ್ಣವರ ಮಾತನಾಡಿ, ಜಿಲ್ಲೆಯಲ್ಲಿ ಮಾವು ಉತ್ತಮ ಬೆಳೆ ಬಂದಿದೆ. ಸಾಕಷ್ಟು ರೈತರು ಮಾವು ಬೆಳೆಗೆ ವಿಮೆ ಮಾಡಿಸಿದ್ದಾರೆ. ತುಂತುರು ನೀರಾವರಿಗೆ ಹಾಗೂ ಕೃಷಿಹೊಂಡ ಹೊಂದಲು ರೈತರಿಗೆ ನೀಡಲಾಗುತ್ತಿದೆ. ತೋಟಗಾರಿಕೆ ಬೆಳೆ ಬೆಳೆಯುವ ಪ್ರದೇಶ ವಿಸ್ತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
2022-23ನೇ ಸಾಲಿನ ಹವಾಮಾನ ಆದಾರಿತ ಮಾವು ಬೆಳೆ ವಿಮೆಗೆ 9145 ಜನ ರೈತರು ನೊಂದಣಿಯಾಗಿದ್ದರು. ಈಗ ಇದರಲ್ಲಿ 3126 ಜನ ರೈತರಿಗೆ ರೂ.10 ಕೋಟಿ ಪರಿಹಾರ ಬಿಡುಗಡೆ ಹಂತದಲ್ಲಿದೆ ಮತ್ತು ಉಳಿದ 5600 ಜನ ರೈತರಿಗೆ ಪರಿಹಾರ ವಿಮೆ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ಪಾಟೀಲ ಶಶಿ ಅವರು ಮಾತನಾಡಿ, ಬರುವ ಫೆಬ್ರುವರಿಯಲ್ಲಿ ಹೊಸದಾಗಿ 108 ಅಂಬುಲೆನ್ಸ್ ಗಳು ಬರುತ್ತಿವೆ. ಜಿಲ್ಲೆಯಲ್ಲಿ ಅಗತ್ಯವಿದ್ದಲ್ಲಿ ಬಳಸಲು ಯೋಜನೆ ಸಿದ್ದಗೊಳಿಸಲಾಗಿದೆ. ಜಿಲ್ಲೆಯಲ್ಲಿ ಲಿಂಗಾನಪಾತ ಕಡಿಮೆ ಇದ್ದು, ಇದರ ಬಗ್ಗೆ ಜಾಗೃತಿ ಮೂಡಸಲಾಗುತ್ತಿದೆ ಎಂದು ಹೇಳಿದರು.