Sunday, April 20, 2025
Google search engine

Homeಸ್ಥಳೀಯಅಧಿಕಾರಿಗಳಿಗೆ ತೊಂದರೆ ಆದರೆ ಲೋಕಾಯುಕ್ತಗೆ‌ ದೂರು ನೀಡಬಹುದು: ಕೃಷ್ಣ ಭೈರೇಗೌಡ

ಅಧಿಕಾರಿಗಳಿಗೆ ತೊಂದರೆ ಆದರೆ ಲೋಕಾಯುಕ್ತಗೆ‌ ದೂರು ನೀಡಬಹುದು: ಕೃಷ್ಣ ಭೈರೇಗೌಡ

ಮೈಸೂರು: ಅಧಿಕಾರಿಗಳಿಗೆ ತೊಂದರೆ ಆದರೆ ನೇರವಾಗಿ ಲೋಕಾಯುಕ್ತಗೆ‌ ದೂರು ನೀಡಬಹುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಕಂದಾಯ ಇಲಾಖೆಯ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಲು ಮೈಸೂರಿಗೆ ಆಗಮಿಸಿದ ಕೃಷ್ಣ ಭೈರೇಗೌಡ ಅವರು, ಸಚಿವ ಚೆಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿ, ಇದೊಂದು ರಾಜಕೀಯ ಆಟ. ಇದನ್ನ ರಾಜಕೀಯವಾಗಿಯೇ ಫೇಸ್ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಸುಳ್ಳು ದಾಖಲೆ ಪತ್ರಗಳನ್ನ ಸೃಷ್ಟಿ ಮಾಡಿ ಸರ್ಕಾರಕ್ಕೆ ಅಪಪ್ರಚಾರ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಶಾಸಕರ ಪತ್ರ ಸಹ ನಕಲಿ ಮಾಡಿದ್ದರು. ಇದಕ್ಕೆ ವ್ಯಾಪಕ ಪ್ರಚಾರ ಸಹ ಸಿಕ್ಕಿತ್ತು. ನಕಲಿ ಪತ್ರ ಅಂತ ಗೊತ್ತಿದ್ರು ವ್ಯಾಪಕ ಪ್ರಚಾರ ಸಿಕ್ತು. ಚೆಲುವರಾಯಸ್ವಾಮಿ‌ ವಿಚಾರದಲ್ಲೂ ಈಗಾಗಲೇ ಅಧಿಕಾರಿಗಳೇ ಸ್ಪಷ್ಟ ಪಡಿಸಿದ್ದಾರೆ. ಪತ್ರ ನಾವು ಬರೆದಿಲ್ಲ, ಅದು ನಕಲಿ ಅಂಥ. ಈ ವಿಚಾರವೇ ನಮಗೆ ಗೊತ್ತಿಲ್ಲ ಅಂಥ ಅಧಿಕಾರಿಗಳು ಹೇಳಿದ್ದಾರೆ.  ನಕಲಿ ದಾಖಲೆ ಸೃಷ್ಟಿ ಮಾಡಿ ಜನರಿಗೆ ಸರ್ಕಾರದ ಮೇಲೆ ಕೆಟ್ಟ ಹೆಸರು ತರಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿರೋಧ ಪಕ್ಷದವರಿಗೆ ಸರ್ಕಾರದ ಜನಪ್ರಿಯತೆ ಸಹಿಸಲು ಸಾಧ್ಯವಾಗುತ್ತಿಲ್ಲ. ಕೊಟ್ಟ ಮಾತನ್ನ ರಾಜ್ಯ ಸರ್ಕಾರ ಈಡೇರಿಸಿದೆ. 5 ವರ್ಷವಾದರೂ ಗ್ಯಾರೆಂಟಿ ಜಾರಿ ಮಾಡಲು ಸಾಧ್ಯವಿಲ್ಲ ಅಂದ್ರು. ಸರ್ಕಾರ ಬಂದ ಎರಡೇ ತಿಂಗಳಲ್ಲಿ ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಹೊಸ ಸರ್ಕಾರ ಬಂದ ಮೇಲೆ ಒಂದು ಒಳ್ಳೆಯ ಆಡಳಿತ ಕೊಡುವ ದೃಷ್ಟಿಯಿಂದ ಆಡಳಿತವನ್ನು ಚುರುಕುಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಸಾವಿರಾರು ವ್ಯಾಜ್ಯ ಪ್ರಕರಣಗಳಿವೆ. ಅವುಗಳ ಇತ್ಯರ್ಥ ಮತ್ತು ಪರಿಹಾರ ಕಂಡುಕೊಳ್ಳಲು ಇಂದು ಸಭೆ ಮಾಡುತ್ತಿದ್ದೇವೆ ಎಂದರು.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಂದಾಯ ಅದಾಲತ್

ರಾಜ್ಯದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಂದಾಯ ಅದಾಲತ್ ಮಾಡುವ ಚಿಂತನೆ ಇದೆ. ಸಣ್ಣಪುಟ್ಟ ವ್ಯಾಜ್ಯಗಳನ್ನ ಅಲ್ಲೇ ಪರಿಹರಿಸಿಕೊಳ್ಳಬಹುದು. ಹಿಂದೆ ಇದ್ದ ನಮ್ಮ ಸರ್ಕಾರ ಅದೇ ಕೆಲಸ ಮಾಡಿತ್ತು. ಈಗ ಅದನ್ನು ಮುಂದುವರಿಸುವ ಕುರಿತು ಪರಿಶೀಲನೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಸರ್ಕಾರದಿಂದ ಕಠಿಣ ಕ್ರಮ

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಡುವ ಜೊತೆಗೆ ಅವರ ತಲೆಯ ಮೇಲೆ ಕೂತು ಕೆಲಸ ಮಾಡಿಸುವ ನಿಟ್ಟಿನಲ್ಲಿ ನಾವು ಒತ್ತಡ ಹಾಕುತ್ತೇವೆ. ಈಗಾಗಲೇ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಭೆ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಒತ್ತುವರಿ ಸಹಿಸುವುದಿಲ್ಲ. ಮುಖ್ಯಮಂತ್ರಿಗಳ ನಿರ್ದೇಶನದಂತೆ ನಾವು ಒತ್ತುವರಿ ತೆರವು ಮಾಡಿಯೇ ತೀರುತ್ತೇವೆ. ಯಾರ ಪ್ರಭಾವಕ್ಕೂ ಒಳಗಾಗುವ ಮಾತಿಲ್ಲ. ರಾಜ್ಯದ ಎಲ್ಲಾ ಭಾಗಗಳಲ್ಲೂ ಒತ್ತುವರಿ ತೆರವು ಪ್ರಕ್ರೀಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular