ನವದೆಹಲಿ: ಅಧಿಕಾರಿಗಳು ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿ ಎಚ್ಚರಿಕೆ ನೀಡಿದೆ.
ಆರೋಪಿಗಳ ಮನೆಗಳನ್ನು ಸರ್ಕಾರಗಳು ಬುಲ್ಡೋಜರ್ ಬಳಸಿ ಧ್ವಂಸ ಮಾಡುತ್ತಿರುವನ್ನು ನಿಲ್ಲಿಸಲು ಆದೇಶ ನೀಡುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶವನ್ನು ಪ್ರಕಟಿಸಿದೆ.
ಸುಪ್ರೀಂ ಆದೇಶದಲ್ಲಿ ಏನಿದೆ?
ಆರೋಪಿಯ ಆಸ್ತಿಯನ್ನು ಕೆಡವಲು ನಿರ್ಧರಿಸಲು ಸಾಧ್ಯವಿಲ್ಲ. ಸರ್ಕಾರ ನಾಶ ಮಾಡುವ ಆಸ್ತಿಯ ಮಾಲೀಕರಿಗೆ 15 ದಿನಗಳ ಮುಂಚಿತವಾಗಿ ನೋಟಿಸ್ ನೀಡದೇ ಯಾವುದೇ ಆಸ್ತಿ ನೆಲಸಮವನ್ನು ನಡೆಸಬಾರದು.
ನೋಟಿಸ್ ಅನ್ನು ಮಾಲೀಕರಿಗೆ ನೋಂದಾಯಿತ ಅಂಚೆ ಮೂಲಕ ನೀಡಬೇಕು. ಅನಧಿಕೃತ ಕಟ್ಟಡವಾಗಿದ್ದರೆ ನಿರ್ಮಾಣದ ಸ್ವರೂಪ, ನಿರ್ದಿಷ್ಟ ಉಲ್ಲಂಘನೆಯ ವಿವರಗಳನ್ನು ನೋಟಿಸ್ ನಲ್ಲಿ ಉಲ್ಲೇಖಿಸಬೇಕು
ಆಕ್ಷೇಪಣೆ ಸಲ್ಲಿಸಲು ಆರೋಪಿಯ ಮನೆಯವರಿಗೆ ಅವಕಾಶ ನೀಡಬೇಕು. ಕಟ್ಟಡ ತೆರವು ಕಾರ್ಯಚರಣೆಯನ್ನು ಚಿತ್ರೀಕರಿಸಬೇಕು.