Friday, August 15, 2025
Google search engine

Homeರಾಜ್ಯಸುದ್ದಿಜಾಲಗುಂಡಿ ಬಿದ್ದ ರಸ್ತೆಗೆ ಮಣ್ಣು ಸುರಿದು ಹರಡದೆ ಹಾಗೆ ಬಿಟ್ಟ ಅಧಿಕಾರಿಗಳು

ಗುಂಡಿ ಬಿದ್ದ ರಸ್ತೆಗೆ ಮಣ್ಣು ಸುರಿದು ಹರಡದೆ ಹಾಗೆ ಬಿಟ್ಟ ಅಧಿಕಾರಿಗಳು


ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿಯಿಂದ ಹುಣಸೆಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ನಿತ್ಯ ಲಾರಿಗಳ ಸಂಚಾರದಿಂದ ಹದಗೆಟ್ಟು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ .

ಹುಣಸೆಕೊಪ್ಪಲು ಹೊರವಲಯದಲ್ಲಿ ಎರಡು ಮೂರು ಕ್ರಷರ್ ಹಾಗೂ ಕಲ್ಲಿನ ಗಣಿಗಾಣಿಗಾರಿಕೆಗಳು ನಡೆಯುವ ಸ್ಥಳಗಳಾಗಿದ್ದು, ಈ ಕ್ರಷರ್ ಗಳಿಂದ ನಿತ್ಯ ಜಲ್ಲಿಕಲ್ಲು , ಕಲ್ಲಿನ ಪುಡಿ ಸೇರಿದಂತೆ ಇನ್ನಿತರ ವಸ್ತುಗಳನ್ನು ತುಂಬಿಕೊಂಡು ಓಡಾಡುವ ವಾಹನಗಳು ಈ ರಸ್ತೆಯನ್ನೇ ಹೆಚ್ಚಾಗಿ ಅವಲಂಬಿಸಿದ ಪರಿಣಾಮ ರಸ್ತೆ ಬೇಗ ಹಾಳಾಗುವುದಲ್ಲದೆ, ದ್ವಿಚಕ್ರವಾಹನ ಸವಾರರಿಗೆ ಅಪಘಾತವಾಗುವ ಸಂಭವ ಹೆಚ್ಚಾಗಿದೆ.

ಗ್ರಾಮ ಪಂಚಾಯತಿ ಚಪ್ಪರದಹಳ್ಳಿ ಗ್ರಾಮದ ಮೊಗೆಕೆರೆ ಏರಿಯು ಈಗಾಗಲೇ ಬೃಹತ್ ಗುಂಡಿ ಗಳು ಬಿದ್ದಿದ್ದು, , ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಇದಲ್ಲದೆ ಕಲ್ಲಿನಪುಡಿ (ಡಸ್ಟ್) ತುಂಬಿಕೊಂಡು ಸಂಚಾರ ಮಾಡುವಂತಹ ಟ್ರಕ್ ಹಾಗೂ ಲಾರಿಗಳಿಂದ ಸ್ಥಳೀಯ ನಿವಾಸಿಗಳು ನಿತ್ಯ ಧೂಳಿನ ಸಮಸ್ಯೆ ಹೆದರಿಸುತ್ತಿದ್ದಾರೆ. ಇದರಿಂದ ಅರೋಗ್ಯ ಸಮಸ್ಯೆ ಕಾಡುವ ಭಯಭೀತಿ ಸ್ಥಳೀಯರಿಯಲ್ಲಿ ಆತಂಕ ಮೂಡಿಸಿದೆ. ಈ ಸಮಸ್ಯೆ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಯಾಗಲಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹಾಳಾಗುತ್ತಿರುವ ರಸ್ತೆಯನ್ನು ಸಂರಕ್ಷಿಸಬೇಕು, ಅಧಿಕ ಟ್ರಕ್ ಹಾಗೂ ಲಾರಿಗಳ ಓಡಾಟಕ್ಕೆ ಕಡಿವಾಣವಾಗಬೇಕು ಮತ್ತು ಕ್ರಷರ್ ಮಾಲೀಕರು ತಮ್ಮ ಲಾರಿಗಳು ರಸ್ತೆಯಲ್ಲಿ ಸಂಚರಿಸುವ ಮುನ್ನ ರಸ್ತೆಗೆ ನೀರನ್ನು ಹಾಕುವ ಮೂಲಕ ಧೂಳಿನ ಸಮಸ್ಯೆ ಬಾರದಂತೆ ಎಚ್ಚರವಹಿಸುವಂತೆ ಅಧಿಕಾರಿಗಳು ಸೂಚಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗೋಪಾಲ್ ಸಿ ಆರ್, ಸ್ಥಳೀಯ ನಿವಾಸಿ : ಕೆರೆ ಏರಿಯಾ ಸೇತುವೆಯ ಮೇಲೆ ಗುಂಡಿ ಬಿದ್ದಿರುವ ಕಾರಣ ಮಣ್ಣನ್ನು ಸುರಿದಿದ್ದಾರೆ. ಆದರೆ ಸುರಿದುರುವ ಮಣ್ಣನ್ನು ಹರಡದೆ ಗುಡ್ಡೆ ಮಾಡಿರುವುದರಿಂದ ರಾತ್ರಿ ಸಮಯದಲ್ಲಿ ಸಂಚರಿಸುವ ವಾಹನಗಳಿಗೆ ತುಂಬಾ ತೊಂದರೆಯಾಗುತ್ತಿದೆ. ತಕ್ಷಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸುರಿದಿರುವ ಮಣ್ಣಿನ ಗುಡ್ಡೆಗಳನ್ನು ತೆರವುಗೊಳಿಸಿ.

RELATED ARTICLES
- Advertisment -
Google search engine

Most Popular