Friday, April 11, 2025
Google search engine

Homeಅಪರಾಧಮಾಂಸಹಾರಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿ: ೫೨ ಕೇಸ್ ದಾಖಲು, ೬೨೫೦ ರೂ. ದಂಡ ವಸೂಲಿ

ಮಾಂಸಹಾರಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿ: ೫೨ ಕೇಸ್ ದಾಖಲು, ೬೨೫೦ ರೂ. ದಂಡ ವಸೂಲಿ


ಕೆ.ಆರ್.ನಗರ: ಪಟ್ಟಣದ ವಿವಿಧೆಡೆ ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳು ಹಾಗೂ ಮಾಂಸಹಾರಿ ಹೋಟೆಲ್‌ಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳ ತಂಡ ಹಲವು ದಿನಗಳಿಂದ ಶೇಖರಿಸಲಾಗಿದ್ದ ಮಾಂಸ ವಶಪಡಿಸಿಕೊಂಡು ಅಪಾರ ದಂಡ ವಿಧಿಸುವ ಮೂಲಕ ಅಂಗಡಿ ಮಾಲೀಕರುಗಳಿಗೆ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಎಂ.ಜಿ.ಸಂತೋ? ಕುಮಾರ್ ನೇತೃತ್ವದಲ್ಲಿ ಪಟ್ಟಣದ ಗರಡುಗಂಭ ವೃತ್ತ, ಮೈಸೂರು ರಸ್ತೆ, ಹಾಸನ ರಸ್ತೆ, ವಿ.ವಿ. ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಅಕ್ರಮವಾಗಿ ಅನುಮತಿ ಇಲ್ಲದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ತಂಬಾಕು ಉತ್ಪನ್ನಗಳನ್ನು ವಶ ಪಡಿಸಿಕೊಂಡರಲ್ಲದೇ ಮಾಲೀಕರಿಗೆ ದಂಡ ವಿಧಿಸಿ ಮತ್ತೊಮ್ಮೆ ಮಾರಾಟ ಮಾಡದಂತೆ ಸೂಚನೆ ನೀಡಿದರು.
ಪಟ್ಟಣದ ವಿ.ವಿ. ರಸ್ತೆಯ ನವನಗರ ಅರ್ಬನ್ ಬ್ಯಾಂಕ್ ಮುಂಭಾಗ ಇರುವ ಗಣಿಸ್ ಹೊಟೇಲ್ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಹಲವಾರು ದಿನಗಳಿಂದ ಶೇಖರಿಸಿಟ್ಟಿದ್ದ ಕೋಳಿ ಮಾಂಸವನ್ನು ನೋಡಿ ಮಾಲೀಕರಿಗೆ ತರಾಟೆ ತೆಗೆದುಕೊಂಡ ಅಧಿಕಾರಿಗಳು ಅದನ್ನು ತೆರವು ಮಾಡಿಸಿ ಪುರಸಭಾ ಅಧಿಕಾರಿಗಳಿಂದ ೬ ಸಾವಿರ ಹಾಗೂ ಆರೋಗ್ಯ ಇಲಾಖೆಯಿಂದ ೪೦೦ ರೂ ದಂಡ ವಿಧಿಸಿ ಮತ್ತೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು. ಅಲ್ಲದೇ ಪಟ್ಟಣದ ಹಾಸನ ರಸ್ತೆಯಲ್ಲಿರುವ ಡಾಬಾದ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಹಲವು ದಿನಗಳಿಂದ ಶೇಖರಿಸಿಟ್ಟಿದ್ದ ಮಾಂಸವನ್ನು ತೆರವು ಮಾಡಿಸಿ ೨ ಸಾವಿರ ದಂಡ ವಿಧಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ, ಆಹಾರದ ರಕ್ಷಣೆ ಕಾಯ್ದೆ ಅಡಿ ತಹಸೀಲ್ದಾರ್ ನೇತೃತ್ವದ ನಮ್ಮ ತಂಡ ಪ್ರತಿ ತಿಂಗಳು ಇಂತಹ ದಾಳಿಗಳನ್ನು ಮಾಡುತ್ತಿದ್ದು ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದರು. ಸ್ವಾಸ್ಥ ಸಮಾಜದ ಮೇಲೆ ದು?ರಿಣಾಮ ಬೀರುವ ಚಟುವಟಿಕೆಗಳು, ಪರವಾನಿಗೆ ಇಲ್ಲದೇ ಹಾಗೂ ಸ್ವಚ್ಚತೆ ಇಲ್ಲದೇ, ನಿ?ಧಿತ ಮಾಂಸಗಳ ಹೋಟೆಲ್‌ಗಳನ್ನು ನಡೆಸುವುದು ಹಾಗೂ ಮಾರಾಟ ಮಾಡುವುದು, ಶಾಲಾ, ಕಾಲೇಜು ಆವರಣಗಳಲ್ಲಿ ಬೀಡಿ, ಸಿಗರೇಟು ಹಾಗೂ ತಂಬಾಕು ಉತ್ಪನಗಳನ್ನು ಮಾರಾಟ ಮಾಡುವುದನ್ನು ನಿ?ದಿಸಲಾಗಿದೆ. ಆದರು ಕೆಲವರು ಕಾನೂನು ಉಲಂಘನೆ ಮಾಡುತ್ತಾ ಜನತೆಯ ಆರೋಗ್ಯದ ಮೇಲೆ ಚೆಲ್ಲಾಟ ವಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಅಂತವರ ವಿರುದ್ದ ಇಂದು ದಾಳಿ ಮಾಡಿ ನಿ?ದಿತ ವಸ್ತುಗಳನ್ನು ವಶಪಡಿಸಿಕೊಳ್ಳುವ ಜತೆಗೆ ಆರೋಗ್ಯ ಇಲಾಖೆಯಿಂದ ೫೨ ಕೇಸುಗಳನ್ನು ದಾಖಲಿಸಿಕೊಂಡು ೬೨೫೦ ರೂಪಾಯಿಗಳ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ. ಮತ್ತೆ ಅವರುಗಳು ಅದೇ ಚಾಳಿ ಮುಂದುವರೆಸಿದರೆ ಅಂಗಡಿಗಳನ್ನು ಮತ್ತು ಹೋಟೆಲ್‌ಗಳನ್ನು ಸೀಜ್ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಪರಿಸರ ಅಭಿಯಂತರೆ ರೀತುಸಿಂಗ್, ಆರೋಗ್ಯ ನಿರೀಕ್ಷಕರಾದ ರಾಜೇಂದ್ರ, ಲೋಕೇಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹೇಶ್, ಭರತ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳಾದ ಶಿವಕುಮಾರ್, ?ರೀಪ್, ಪೋಲಿಸ್ ಸಿಬ್ಬಂದಿಗಳಾದ ರವಿಸ್ವಾಮಿ, ಪುನೀತ್, ಇಸಿಒ ದಾಸಪ್ಪ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular