Sunday, April 20, 2025
Google search engine

Homeಸ್ಥಳೀಯಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಿ : ಡಾ ಯತೀಂದ್ರ ಸಿದ್ದರಾಮಯ್ಯ

ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಿ : ಡಾ ಯತೀಂದ್ರ ಸಿದ್ದರಾಮಯ್ಯ

ತಿ. ನರಸೀಪುರ: ಅಧಿಕಾರಿಗಳು ಕಾನೂನನ್ನೇ ಹಿಡಿದುಕೊಂಡು ಜನರಿಗೆ ತೊಂದರೆ ಕೊಡದೆ ಮಾನವೀಯತೆಯಿಂದ ಕೆಲಸ ಮಾಡಬೇಕು ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.

ವರುಣಾ ಕ್ಷೇತ್ರದ ಯಡದೊರೆ, ಕುರಿಸಿದ್ದನಹುಂಡಿ, ಗರ್ಗೇಶ್ವರಿಗಳಲ್ಲಿ ಜನಸಂಪರ್ಕ ಸಭೆ ಕಂದಾಯ ಅದಾಲತ್, ಪಿಂಚಣಿ ಅದಾಲತ್, ಇ-ಸ್ವತ್ತು ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು ಜನರು ನಮ್ಮ ಬಳಿ ದೂರುಗಳನ್ನು ತರುತ್ತಿದ್ದಾರೆ ಎಂದರೆ ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ. ಅಧಿಕಾರಿಗಳು ಎಲ್ಲದ್ದಕ್ಕೂ ಕಾನೂನನ್ನು ಹಿಡಿದುಕೊಂಡು ಕುಳಿತರೆ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಆದ್ದರಿಂದ ಆದಷ್ಟು ಕಾನೂನಿನಡಿಯಲ್ಲಿ ಮಾನವೀಯತೆಗೆ ಮೊದಲ ಆದ್ಯತೆ ಕೊಟ್ಟು ಕೆಲಸ ಮಾಡಿ ಎಂದ ಅವರು ಯಡದೊರೆ ಗ್ರಾಮದವರು ಮೊದಲಿನಿಂದಲೂ ನಮ್ಮನ್ನು ಬೆಂಬಲಿಸಿಕೊಂಡು ಬಂದಿದ್ದೀರಿ ನಿಮ್ಮ ಗ್ರಾಮದ ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತೇನೆ.

ಹಕ್ಕುಪತ್ರವಿಲ್ಲದೆ ನಿವೇಶನ ಉಳ್ಳವರಿಗೆ ಮಹಜರು ಮಾಡಿ ಅಕ್ಕ-ಪಕ್ಕದವರನ್ನು ವಿಚಾರಿಸಿ ಅವರಿಗೆ ಖಾತೆ ಮಾಡಿ ಕೊಡಿ. ಹಾಲಿನ ಡೈರಿ ಕಟ್ಟಲು ಶಾಸಕರ ಅನುದಾನ ನೀಡುತ್ತೇವೆ. ಕೆ.ಇ.ಬಿ ಯವರು ವರುಣಾ ಕ್ಷೇತ್ರದಲ್ಲಿ ಎಲ್ಲೆಲ್ಲಿ ವೈರುಗಳು ಜೋತು ಬಿದ್ದಿವೆ, ಕಂಬಗಳು ಶಿಥಿಲವಾಗಿವೆ ಅವೆಲ್ಲವನ್ನೂ ಸರಿಪಡಿಸಿ ಯುವಕರಿಗೆ ಕೆಲಸ ಕೊಡಿಸಲು ಪ್ರಯತ್ನ ಮಾಡುತ್ತೇನೆ. ವೃದಾಪ್ಯ ವೇತನ ಪಿಂಚಣಿಯನ್ನು ಜನರಿಗೆ ತಲುಪಿಸಿ ಆಗದೇ ಇರುವವರಿಗೆ ಮಾಡಿಕೊಡಿ, ನಮ್ಮ ಸರ್ಕಾರ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಮಳೆ ಅಭಾವದಲ್ಲೂ ರೈತರಿಗೆ ೭ ಗಂಟೆ ವಿದ್ಯುತ್ ನೀಡುವುದಾಗಿ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ವಿಜಯ್, ತಹಸೀಲ್ದಾರ್ ಸುರೇಶ್ ಆಚಾರ್, ಜಿ.ಪಂ. ಮಾಜಿ ಸದಸ್ಯ ಮಹದೇವ್, ಇ.ಓ. ಕೃಷ್ಣ ಸಿ., ಬಿ.ಇ.ಓ. ಶೋಭ, ಎ.ಇ.ಇ. ಚರಿತ, ಪ್ರೊಬೆಷನರಿ ತಹಸಿಲ್ದಾರ್ ಮಹೇಶ್ ಪಾಟೀಲ್, ಆರ್.ಐ. ಮಹೇಂದ್ರ, ಪಿ.ಡಿ.ಓ. ಅಮ್ಜದ್ ಪಾಷಾ, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್‌ಕುಮಾರ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular