ರಾಮನಗರ: ಜಿಲ್ಲೆಯಲ್ಲಿಬಾಲ್ಯ ವಿವಾಹ ತಡೆಗಟ್ಟಲು ಮಕ್ಕಳ ರಕ್ಷಣಾಘಟಕದ ನಿರೂಪಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಐ.ಸಿ.ಡಿ.ಎಸ್ ಮೇಲ್ವಿಚಾರಕಿಯರನ್ನೊಳಗೊಂಡ ಸಮಿತಿಯು ಬಾಲ್ಯ ವಿವಾಹದ ಮಾಹಿತಿ ತಿಳಿದ ಕೂಡಲೇಬಾಲ್ಯವಿವಾಹ ತಡೆಗೆಕ್ರಮವಹಿಸಬೇಕು.ಇಲ್ಲವಾದಲ್ಲಿಸಮಿತಿಯವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಸ್. ಮಂಜುಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿನಡೆದಜಿಲ್ಲಾ ಮಕ್ಕಳ ರಕ್ಷಣಾಘಟಕದ ಪ್ರಗತಿ ಪರಿಶೀಲನಾ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.ವಲಸೆ ಬಂದಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆಮತ್ತು ಬಾಲನ್ಯಾಯ ಕಾಯ್ದೆ-೨೦೧೫, ಜಿಲ್ಲಾ ಮಕ್ಕಳ ರಕ್ಷಣಾಘಟಕ, ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿಯ ಕಾರ್ಯವೈಖರಿ, ಬಾಲ್ಯವಿವಾಹ, ಬಾಲಕಾರ್ಮಿಕತೆ, ಪೋಕ್ಸೋ ಕಾಯ್ದೆ-೨೦೧೨, ದತ್ತು ಪ್ರಕ್ರಿಯೆ ಹಾಗೂ ಮಾಸಾಚರಣೆ, ಮಕ್ಕಳ ಸಹಾಯವಾಣಿ-೧೦೯೮/೧೧೨ಕುರಿತಂತೆತರಬೇತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಎಂದು ತಿಳಿಸಿದರು.
ಜಿಲ್ಲೆಯಲ್ಲಿ ೨೦೧೭ ರಿಂದಇಲ್ಲಿಯವರಿಗೆ ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳಲ್ಲಿ ಆತ್ಮಹತ್ಯೆ,ಬಾಲ್ಯ ವಿವಾಹ, ವ್ಯಸನಿಗಳಾಗಿರುತ್ತಾರೆ. ಆದುದರಿಂದಜಿಲ್ಲೆಯಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಮಾದಕ ವಸ್ತು, ಬಾಲಾಪರಾದ ಹಾಗೂ ಕಾನೂನುಕುರಿತು ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.ಜಿಲ್ಲೆಯಲ್ಲಿ ಹೆಚ್.ಐ.ವಿ ಸೋಂಕಿತ ಮತ್ತು ಬಾದಿತ ಮಕ್ಕಳ ಪೋಷಕರು ಸೋಂಕಿತರಾಗಿದ್ದು, ಜಿಲ್ಲಾಎ.ಆರ್.ಟಿಕೇಂದ್ರದಲ್ಲಿಚಿಕಿತ್ಸೆ ಪಡೆಯುತ್ತಿದ್ದು, ಅಂತವರ ಮಕ್ಕಳಿಗೆ ಅನುದಾನ ಪಡೆಯಲುಒಪ್ಪಿಗೆ ಪಡೆದು, ತಿಂಗಳಿಗೆ ೧೦೦೦ ರೂ.ಗಳಂತೆ ಅಥವಾಕೇಂದ್ರಕಚೇರಿಯಆದೇಶದಂತೆ ಅವರುಗಳ ವೈಯಕ್ತಿಕಖಾತೆಗೆ ಪ್ರಸ್ತುತಡಿ.ಬಿ.ಟಿ ಪೋರ್ಟಲ್ ಮೂಲಕ ಅನುದಾನವನ್ನು ವರ್ಗಾವಣೆ ಮಾಡುವಯೋಜನೆಯಾಗಿರುತ್ತದೆ.
ಅದರಂತೆ ೨೦೨೨-೨೩ನೇ ಸಾಲಿನ ೧ನೇ ಮತ್ತು ೨ನೇ ಕಂತಿನ ತ್ರೈಮಾಸಿಕ ಫಲಾನುಭವಿಗಳಿಗೆ ಅನುದಾನಜಮೆ ಮಾಡಲಾಗಿದ್ದು, ೩ನೇ ತ್ರೈಮಾಸಿಕ ಕಂತಿಗೆ ೭,೫೨,೦೦೦/-ಗಳ ಅನುದಾನ ಬೇಡಿಕೆಯನ್ನುಕೇಂದ್ರಕಚೇರಿಗೆ ಸಲ್ಲಿಸಲಾಗಿದೆಎಂದು ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ನಾಗವೇಣಿ ಅವರು ಸಭೆಗೆ ಮಾಹಿತಿ ನೀಡಿದರು. ಕೋವಿಡ್-೧೯ರ ಕಾರಣದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಮಾಹಿತಿ:ಜಿಲ್ಲೆಯಲ್ಲಿ೮ ಮಕ್ಕಳನ್ನು ಪಿಎಂ ಕೇರ್‍ಸ್‌ಯೋಜನೆಗೆ ಒಳಪಟ್ಟಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದಲಭ್ಯವಿರುವಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿರುತ್ತದೆ ಹಾಗೂ ಪ್ರಸ್ತುತ೮ ಮಕ್ಕಳಲ್ಲಿ ಒಂದು ಮಗುವಿಗೆ ಮೇ-೨೦೨೨ರ ಮಾಹೆ ಹಾಗೂ ಮತ್ತೊಂದು ಮಗು ಜೂನ್-೨೦೨೩ರಲ್ಲಿ ೧೮ ವರ್ಷ ಪೂರ್ಣಗೊಂಡಿರುತ್ತದೆ. ಉಳಿದ ೬ ಮಕ್ಕಳು ಯೋಜನಾ ವ್ಯಾಪ್ತಿಗೆಒಳಪಟ್ಟಿರುತ್ತಾರೆ ಎಂದರು.
ದತ್ತು ಪಡೆದ ಮಗುವನ್ನು ಇತ್ತೀಚೆಗೆ ಬಾಲಮಂದಿರಕ್ಕೆ ವಾಪಸ್ಸು ಬಿಟ್ಟು ಹೋಗಿರುವ ಪ್ರಕರಣಕಂಡು ಬಂದಿದ್ದು,ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬರುವ ಪೋಷಕರು ಹಾಗೂ ಸಮಾಲೋಚಕರೊಂದಿಗೆ ಸಭೆ ನಡೆಸಿ ಪೋಷಕರುದತ್ತು ತೆಗೆದುಕೊಳ್ಳುವ ಆಸಕ್ತಿಯ ಮಾಹಿತಿಯನ್ನು ಕಲೆಹಾಕಿ ನಂತರ ಅವರಿಗೆ ದತ್ತು ನೀಡುವುದು ಒಳ್ಳೆಯದು ಎಂದರು.ಸಭೆಯಲ್ಲಿ ಜಿಲ್ಲಾಧಿಕಾರಿಡಾ. ಅವಿನಾಶ್ ಮೆನನ್‌ರಾಜೇಂದ್ರನ್, ಅಪರಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಉಪ ಪೊಲೀಸ್ ವರಿಷ್ಠಾಧಿಕಾರಿದಿನಕರ್ ಶೆಟ್ಟಿ, ಉಪವಿಭಾಗಾಧಿಕಾರಿ ಬಿನೋಯ್, ಜಿಲ್ಲಾಆರೋಗ್ಯಮತ್ತುಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ನಿರಂಜನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಉಪ ನಿರ್ದೇಶಕ ಪ್ರಸನ್ನ,ಮಕ್ಕಳ ರಕ್ಷಣಾಘಟಕದಅಧ್ಯಕ್ಷರು/ಸದಸ್ಯರುಗಳು, ಮಹಿಳಾ ಘಟಕದ ಸದಸ್ಯರುಗಳು,ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.