Saturday, April 19, 2025
Google search engine

Homeರಾಜ್ಯಸುದ್ದಿಜಾಲನ.9ಕ್ಕೆ ಮೈಸೂರಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ಕಾರ್ಯಕ್ರಮ

ನ.9ಕ್ಕೆ ಮೈಸೂರಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ಕಾರ್ಯಕ್ರಮ

ಮೈಸೂರು: ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ನವೆಂಬರ್ 9 ರ ಸಂಜೆ 5.30 ಕ್ಕೆ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುಣ್ಯಸ್ಮರಣೆ ಹಾಗೂ ರಾಷ್ಟ್ರಕವಿ ಕುವೆಂಪುರವರ ಜಯಂತೋತ್ಸವ ಏರ್ಪಡಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸುವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸುವರು.

ಹೈಕೋರ್ಟಿನ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಅಧ್ಯಕ್ಷತೆವಹಿಸುವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರಿನ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ಶ್ರೀ ಸೋಮೇಶ್ವರನಾಥ ಸ್ವಾಮಿಗಳು ಉಪಸ್ಥಿತಿಯಿರುವರು . ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ್, ಶಾಸಕರಾದ ಡಾ.ಮಂಥರ್ ಗೌಡ, ಕೆ. ಹರೀಶ್ ಗೌಡ , ರಾಜಸ್ತಾನದ ಐಜಿಪಿ ರಾಘವೇಂದ್ರ ಸುಹಾಸ್, ರಾಜ್ಯ ಕಾರ್ಮಿಕ ಆಯುಕ್ತ ಡಾ.ಹೆಚ್. ಎನ್ ಗೋಪಾಲಕೃಷ್ಣ , ದಕ್ಷಿಣ ಪ್ರಾಂತ್ಯ ಸಿಬ್ಬಂದಿ ನೇಮಕಾತಿ ಆಯೋಗದ ಪ್ರಾದೇಶಿಕ ನಿರ್ದೇಶಕ ಕೆ ನಾಗರಾಜ್ , ಆಂತರಿಕ ಭದ್ರತಾ ವಿಭಾಗದ ಎಸ್ಪಿ ಡಾ.ಎ. ನ್. ಪ್ರಕಾಶಗೌಡ ಆಗಮಿಸಲಿದ್ದಾರೆ.

ಐಎಎಸ್ ಅಧಿಕಾರಿ ಡಾ.ನಾಗಾರ್ಜುನ್ ಬಿ ಗೌಡ,IRS ಅಧಿಕಾರಿ ಪಿ. ವಿ, ಭ್ಯರಪ್ಪ , AFHQ ಅಧಿಕಾರಿ ಭವ್ಯಶ್ರೀಯವರನ್ನು ಸನ್ಮಾನಿಸಲಾಗುವುದು. ಡಾ. ಕೆ.ಚಿದಾನಂದಗೌಡ ಹಾಗೂ ಶ್ರೀಮತಿ ತಾರಿಣಿ ಚಿದಾನಂದ ಅವರನ್ನ ವಿಶೇಷವಾಗಿ ಅಭಿನಂದಿಸಲಾಗುವುದು.

ಮೈಸೂರು ವಿ ವಿ ಕುಲಪತಿ ಪ್ರೊ.ಎನ್. ಕೆ ಲೋಕನಾಥ್, ಕಾವೇರಿ ಹಾಸ್ಪಿಟಲ್ ಎಂಡಿ ಡಾ.ಚಂದ್ರಶೇಖರ್, ರಾಜ್ಯ ಉಪನೋಂದಣಾಧಿಕಾರಿಗಳ ನಿರ್ದೇಶಕ ವೆಂಕಟೇಶ್, ಆಂಕೋವಿಲ್ಲ್ ಕ್ಯಾನ್ಸರ್ ಹಾಸ್ಪಿಟಲ್ ನ ಎಂಡಿ ಡಾ. ಎಂ. ಆರ್. ಅನಿಲ್ ಕುಮಾರ್ , ಶ್ರೀರಂಗಪಟ್ಟಣದ ಸಮಾಜ ಸೇವಕ , ಉದ್ಯಮಿ ಸಚ್ಚಿದಾನಂದ ಅತಿಥಿಗಳಾಗಿರುವವರು.

ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆಯ ಕವೀಶ್ ಗೌಡ , ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್ , ಎಂ. ಆರ್ ಸತ್ಯನಾರಾಯಣ , ಸಿ ಕೆ ಮಹೇಂದ್ರ, ಮೈಮುಲ್ ಅಧ್ಯಕ್ಷ ಚೆಲುವರಾಜು , ಪವರ್ ಟಿವಿ ಇನ್ಪುಟ್ ಹೆಡ್ ಲೋಕೇಶ್ ಗೌಡ, NRI ಪ್ರತಿನಿಧಿಗಳಾಗಿ ಕತಾರ್ ಕನ್ನಡ ಸಂಘದ ಪ್ರಧಾನ ಸಲೆಹೆಗಾರರಾದ ಮಹೇಶ್ ಗೌಡ, ಕೆನಡಾ ದೇಶದ ಚಲನ ಚಿತ್ರ ವಿತರಕರಾದ ಕಾರ್ತಿಕ್ ಗೌಡ ಆಹ್ವಾನಿತರಾಗಿರುವರು . ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

RELATED ARTICLES
- Advertisment -
Google search engine

Most Popular