ಮಂಗಳೂರು (ದಕ್ಷಿಣ ಕನ್ನಡ): ಮುಳಗುಂದ ಕ್ರಿಯೇಷನ್ಸ್ ಬ್ಯಾನರ್‌ನಡಿ ನಾಗರಾಜ್ ಎಸ್.ಮುಳಗುಂದ ನಿರ್ಮಾಣದ ‘ಒಲವಿನ ಪಯಣ’ ಕನ್ನಡ ಸಿನೆಮಾ ಫೆ.21ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಚಲನ ಚಿತ್ರದ ನಿರ್ದೇಶಕ ಕಿಶನ್ ಬಲ್ನಾಡ್ ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
‘ಒಲವಿನ ಪಯಣ’ ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಯುವಕನ ಬದುಕಿನ ಪಯಣದ ಕಥೆ. ಪ್ರೀತಿ ಮತ್ತು ಕುಟುಂಬ ವಿಷಯವನ್ನು ಆಧಾರಿತ ಚಲನಚಿತ್ರವಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ನಿರ್ಮಾಣ ಮಾಡಲಾಗಿದೆ ಎಂದರು.
ಜೀವನ್ ಗೌಡ ಛಾಯಾಗ್ರಹಣ, ಕೀರ್ತಿರಾಜ್ ಸಂಕಲನ, ಸಾಯಿ ಸರ್ವೇಶ್ ಸಂಗೀತ ಚಿತ್ರಕ್ಕಿದೆ. ಸುನಿಲ್ ನಾಯಕನಾಗಿ, ಖುಷಿ, ಪ್ರಿಯಾ ಹೆಗ್ಡೆ ನಾಯಕಿಯರಾಗಿ, ಪದ್ಮಜಾ ರಾವ್, ಬಲ ರಾಜ್ಜಾಡಿ, ನಾಗೇಶ್ ಮಯ್ಯ, ಸುಧಾಕರ ಬನ್ನಂಜೆ ಮತ್ತಿತರರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ನಾಗರಾಜ್ ಎಸ್. ಮುಳುಗುಂದ, ನಟ ಸುನೀಲ್, ನಟಿಯರಾದ ಖುಷಿ, ಪ್ರಿಯಾ, ಪೋಷಕ ಕಲಾವಿದ ನಾಗೇಶ್ ಮಯ್ಯ ಉಪಸ್ಥಿತರಿದ್ದರು.