Wednesday, April 16, 2025
Google search engine

Homeಅಪರಾಧಹಳೆ ವೈಷಮ್ಯ: ಪತಿ-ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

ಹಳೆ ವೈಷಮ್ಯ: ಪತಿ-ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

ಚಿಂತಾಮಣಿ: ಹಳೇ ವೈಷಮ್ಯದ ಹಿನ್ನೆಲೆ ಪತಿ-ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಗಮಲ್ಲ ಹಾಗೂ ಗಂಡ್ರಗಾನಹಳ್ಳಿ ಮಧ್ಯ ಇರುವ ದುಗ್ಗನಾರೆಪಲ್ಲಿ ಬಳಿ ನಡೆದಿದೆ.

ಹಲ್ಲೆಗೆ ಒಳಗಾದ ವ್ಯಕ್ತಿ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿ ಗಂಡ್ರಗಾನಹಳ್ಳಿ ಗ್ರಾಮದ ಖದೀರ್ ಬೇಗ್ ರವರ ಪುತ್ರ ರೋಷನ್ ಬೇಗ್(೩೦) ಪತ್ನಿ ಅಸ್ಮ ಸುಲ್ತಾನ(೨೮) ಎಂದು ಗುರುತಿಸಲಾಗಿದೆ. ರೋಷನ್ ಬೇಗ್ ಸುಮಾರು ಎರಡು ವರ್ಷಗಳಿಂದ ಕಲ್ಪವೃಕ್ಷ ಖಾಸಗಿ ಬಸ್‌ನಲ್ಲಿ ಡ್ರೈವರ್ ಕೆಲಸ ಮಾಡಿಕೊಂಡು ಬರುತ್ತಿದ್ದು.

ಮುರುಗಮಲ್ಲ ಗ್ರಾಮದ ರಘು ಅವರ ಅನುಯಾಯಿ ಗಂಡ್ರಗಾನಹಳ್ಳಿ ಗ್ರಾಮದ ವಾಸಿಯಾದ ಸುರೇಶ್ ಬಿನ್ ನಾರಾಯಣಸ್ವಾಮಿ(೩೨) ಇವರಿಗೂ ಹಾಗೂ ರೋಷನ್ ಬೇಗ್ ನಡುವೆ ಎರಡು ತಿಂಗಳ ಹಿಂದೆ ಈದ್ ಮಿಲಾದ್ ಹಬ್ಬದಂದು ಗಲಾಟೆಯಾಗಿದ್ದು, ಗ್ರಾಮದ ಹಿರಿಯ ಮುಖಂಡರು ಪಂಚಾಯಿತಿ ಮಾಡಿ ರಾಜಿ ಮಾಡಿದ್ದಾರೆ.

ಹೀಗಿರುವಾಗ ಮತ್ತೆ ಪದೇ ಪದೇ ಸುರೇಶ್ ಹಾಗೂ ಅವನ ಅನುಯಾಯಿಗಳನ್ನು ಕರೆದುಕೊಂಡು ಹೋಗಿ ರೋಷನ್ ಬೇಗ್ ಗೆ ಗುರಾಯಿಸುವುದು ರೇಗಿಸುವುದು ಮಾಡುತ್ತಿದ್ದ ಎನ್ನಲಾಗಿದೆ.

ಡ್ರೈವರ್ ಕೆಲಸ ಮುಗಿಸಿ ಮನೆ ಕಡೆ ರೋಷನ್ ಬೇಗ್ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಸುರೇಶ್ ಹಿಂಬಾಲಿಸಿ ಚಾಕುವಿನಿಂದ ಮರಣಾಂತಿಕ ಹಲ್ಲೆ ನಡೆಸಿದ್ದಾನೆ. ಇನ್ನೂ ಅಲ್ಲಿಗೆ ಬಂದ ರೋಶನ್ ಬೇಗ್ ಅವರ ಪತ್ನಿ ಅಸ್ಮ ಸುಲ್ತಾನ ಅವರ ಮೇಲೆಯೂ ಸಹ ಹಲ್ಲೆ ನಡೆಸಿದ್ದು,
ಹಲ್ಲೆಗೆ ಒಳಗಾದ ಪತಿ-ಪತ್ನಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಂಚಾರ್ಲಹಳ್ಳಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ ತಕ್ಷಣ ಪೊಲೀಸರು ಆಸ್ಪತ್ರೆಗೆ ಧಾವಿಸಿ ಇಬ್ಬರಿಂದ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular