Monday, April 21, 2025
Google search engine

Homeಅಪರಾಧಕಾರು ಡಿಕ್ಕಿಯಾಗಿ ಬೆಂಕಿಗಾಹುತಿಯಾದ ಓಮಿನಿ ವ್ಯಾನ್: ಬಾಲಕಿ ಸಜೀವ ದಹನ

ಕಾರು ಡಿಕ್ಕಿಯಾಗಿ ಬೆಂಕಿಗಾಹುತಿಯಾದ ಓಮಿನಿ ವ್ಯಾನ್: ಬಾಲಕಿ ಸಜೀವ ದಹನ

ಬೆಂಗಳೂರು: ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಓಮಿನಿ ವ್ಯಾನ್​ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, 14 ವರ್ಷದ ಬಾಲಕಿ ಸಜೀವ ದಹನವಾಗಿರುವ ಘಟನೆ ಮಾದಾವರ ಬಳಿ ಭಾನುವಾರ ರಾತ್ರಿ ನಡೆದಿದೆ.

ದಾಸನಪುರ ನಿವಾಸಿ ದಿವ್ಯಾ(14) ಮೃತ ಬಾಲಕಿ. ಘಟನೆಯಲ್ಲಿ ಮಹೇಶ್, ತರುಣ್, ಶಾಂತಿಲಾಲ್, ಸುನೀತಾ, ಮಂಜುಳಾ, ಮಯಾಂಕ್, ನಮನ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಉತ್ತರ ಭಾರತ ಮೂಲದ ಶಾಂತಿಲಾಲ್ ಕುಟುಂಬ 10 ವರ್ಷಗಳ ಹಿಂದೆ ದಾಸನಪುರಕ್ಕೆ ಬಂದು ನೆಲೆಸಿತ್ತು. ನಿನ್ನೆ ಅಬ್ಬಿಗೆರೆಗೆ ಕಾರ್ಯಕ್ರಮ ನಿಮಿತ್ತ ಇಡೀ ಕುಟುಂಬ ಓಮಿನಿ ವ್ಯಾನ್​ನಲ್ಲಿ ತೆರಳಿತ್ತು. ರಾತ್ರಿ ವಾಪಸ್ ದಾಸನಪುರಕ್ಕೆ ಬರುವಾಗ ಮಾರ್ಗ ಮಧ್ಯೆ ಮಾದಾವರ ಬಳಿ ಅತೀ ವೇಗವಾಗಿ ಬಂದ ಬಲೆನೊ ಕಾರು ಓಮಿನಿಗೆ ಡಿಕ್ಕಿ ಹೊಡಿದಿದೆ. ಪರಿಣಾಮ ವ್ಯಾನ್​ ಪಲ್ಟಿ ಆಗಿ ಸ್ಪಾರ್ಕ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ.

ಈ ವೇಳೆ 7 ಜನ ವ್ಯಾನ್​ ನಿಂದ ಹೊರ ಬಿದ್ದು ಪ್ರಾಣ ಉಳಿಸಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ದಿವ್ಯಾ ಸಂಪೂರ್ಣ ದಹನವಾಗಿದ್ದಾಳೆ. ಗಾಯಾಳುಗಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಲೆನೊ ಚಾಲಕ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular