Sunday, April 20, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ನ.೩೦, ಡಿ. ೧ ರಂದು ಜಲಪಾತೋತ್ಸವ ಕಾರ್ಯಕ್ರಮ ಆಯೋಜನೆ-...

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ನ.೩೦, ಡಿ. ೧ ರಂದು ಜಲಪಾತೋತ್ಸವ ಕಾರ್ಯಕ್ರಮ ಆಯೋಜನೆ- ಶಾಸಕ ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಜಿಲ್ಲಾ ಪಂಚಾಯತ್, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ನ.೩೦ ಹಾಗೂ ಡಿ. ೧ ರಂದು ಎರಡು ದಿನಗಳ ಕಾಲ ಜಲಪಾತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಎರಡು ದಿನಗಳು ನಡೆಯುವ ಕಾರ್ಯಕ್ರಮಕ್ಕೆ ಕೆ.ಆರ್.ನಗರ ಸಾಲಿಗ್ರಾಮ ಸೇರಿದಂತೆ ಸುತ್ತಮುತ್ತಲಿನ ತಾಲೂಕಿನ ನಾಗರೀಕರು ಭಾಗವಹಿಸಬೇಕು ಎಂದು ಆಹ್ವಾನ ನೀಡಿದ್ದಾರೆ.

ನ.೩೦ರಂದು ಶನಿವಾರ ಸಂಜೆ ೬.೩೦ ಕ್ಕೆ ಶ್ರೀರಾಮ ದೇವಾಲಯದ ಹಿಂಭಾಗ ಇರುವ ಜಲಪಾತೋತ್ಸವ ವೇದಿಕೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಘನ
ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹಾದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು.

ಸಚಿವರಾದ ಕೆ.ವೆಂಕಟೇಶ್, ಶಿವರಾಜ.ಎಸ್.ತಂಗಡಗಿ, ಶಾಸಕರಾದ ಅನಿಲ್‌ಚಿಕ್ಕಮಾದು, ಎ.ಬಿ.ರಮೇಶ್ ಬಂಡಿ
ಸಿದ್ದೇಗೌಡ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಭಾಗವಹಿಸಲಿದ್ದು, ಶಾಸಕ ಡಿ.ರವಿಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅಥಿತಿಗಳಾಗಿ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್ ಭಾಗವಹಿಸುವರು.

ಸಮಾರಂಭದ ಅತಿಥಿಗಳಾಗಿ ಶಾಸಕರಾದ ತನ್ವಿರ್ ಸೇಠ್, ಜಿ.ಟಿ.ದೇವೇಗೌಡ, ಜಿ.ಟಿ.ಹರೀಶ್ ಗೌಡ, ದರ್ಶನ್‌ದ್ರುವನಾರಾಯಣ, ಕೆ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಸದಸ್ಯರಾದ
ಹೆಚ್.ವಿಶ್ವನಾಥ್, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು.ಜಿ.ಮಾದೇಗೌಡ, ಡಾ.ಎಸ್.ಯತೀಂದ್ರ,
ಕೆ.ವಿವೇಕಾನಂದ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾಡಾ ಅದ್ಯಕ್ಷ ಮರಿಸ್ವಾಮಿ, ಕುಪ್ಪೆ ಗ್ರಾ.ಪಂ ಅಧ್ಯಕ್ಷೆ ಸವಿತಶ್ರೀನಿವಾಸ್, ಉಪಾಧ್ಯಕ್ಷೆ ಗೀತಾಕಾಂತರಾಜು ಸೇರಿದಂತೆ ಸ್ಥಳೀಯ ಪ್ರತಿನಿಧಿಗಳು
ಭಾಗವಹಿಸುವರು.

ಸಂಜೆ ೪.೩೦ ರಿಂದ ೫ರವರೆಗೆ ಬಸವಯ್ಯ ಮತ್ತು ತಂಡದವರಿoದ ಜಾನಪದ ಝೇಂಕಾರ, ೫.ರಿಂದ ೬.೩೦ರ
ವರೆಗೆ ಡಾ.ರಾಮೇಶ್ವರಪ್ಪ ಮತ್ತು ತಂಡದವರಿoದ ಕನ್ನಡ ಸಾಹಿತ್ಯ ವೈಭವ, ೭.೩೦ ರಿಂದ ೯.೩೦ರವರೆಗೆ
ರಘು ದೀಕ್ಷೀತ್ ತಂಡದವರಿoದ ಸಂಗೀತ ಸಂಜೆ ನಡೆಯಲಿದೆ.

ಡಿ. ೧ ರಂದು ಭಾನುವಾರ ಸಂಜೆ ೪.೩೦ ರಿಂದ ೫ ರವರೆಗೆ ರಶ್ಮಿ ಮತ್ತು ತಂಡದವರಿoದ ಜಾನಪದ ಸಂಗೀತ ೫. ರಿಂದ ೬.೩೦ ರವರೆಗೆ ಯು.ರಾಜೇಶ್ ಪಡಿಯಾರ್ ಹಾಗೂ ರಶ್ಮಿ ಚಿಕ್ಕಮಗಳೂರು ಮತ್ತು ತಂಡದವರಿoದ ಸಿ.ಅಶ್ವಥ್ ಗೀತೆಗಳ ಗಾಯನ, ೬.೩೦ರಿಂದ ೭.೩೦ರ ವರೆಗೆ ಕಿರುತರೆ ನಟಿಯರಾದ ನಿಮ್ಮಿಕಾ ರತ್ನಾಕರ್ ಪ್ರಿಯಾಂಕ ಮತ್ತು ಡ್ರೀಮ್ಸ್ ಇವೆಂಟ್ಸ್ ಅಂಡ್ ಫ್ಯಾಷನ್ ಬೆಂಗಳೂರು ಅವರಿಂದ ಸ್ಯಾಂಡಲ್ ವುಡ್ ನೈಟ್ಸ್ ಮತ್ತು ರಾತ್ರಿ ೭.೩೦ ರಿಂದ ೯.೩೦ ರವರೆಗೆ ಗ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮತ್ತು ಹಂಸಿಕಾ ಅಯ್ಯರ್ ತಂಡದವರಿoದ ಸಂಗೀತ ಸಂಜೆ ಆಯೋಜಿಸಲಾಗಿದೆ ಎಂದು ಶಾಸಕರು ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular