ಪಿರಿಯಾಪಟ್ಟಣ: ದಿನಾಂಕ 20.12.2024 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6:00 ವರೆಗೆ ಕಂಪಲಾಪುರ 66/11KV ವಿದ್ಯುತ್ ವಿತರಣಾ ಕೇಂದ್ರಗಳ ಮೂರನೇ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಸದರಿ ದಿನದಂದು ಕಂಪಲಾಪುರ 66/11KV ವಿದ್ಯುತ್ ಉಪಕೇಂದ್ರದಿಂದ ಸರಬರಾಜು ಗೊಳ್ಳುವ ಕಂಪಲಾಪುರ ಎನ್ .ಜೆ . ವೈ ಮತ್ತು ಹರಿಲಾಪುರ ಮತ್ತು ಕೀರನಹಳ್ಳಿ ಫೀಡರ್ ಗಳಿಗೆ ಬರುವ ಗ್ರಾಮ ಕಂಪಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಂಪಲಾಪುರ ಮತ್ತು ಬೋರೆಹೊಸಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಕಡಿತ ಮಾಡಲಾಗುತ್ತದೆ. ಆದ್ದರಿಂದ ಗ್ರಾಹಕರು ಚೆಸ್ಕಾಂ ಪಿರಿಯಾಪಟ್ಟಣದೊಂದಿಗೆ ಸಹಕರಿಸಲು ಕೋರಲಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.