ಸಮಾವೇಶಕ್ಕೆ ಆಗಮಿಸುವಂತೆ ಶಾಸಕ ಡಿ.ರವಿಶಂಕರ್, ಡಾ.ನಟರಾಜು ಆಹ್ವಾನ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬೆಂಗಳೂರು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ (ಎನ್.ಹೆಚ್.ಎಂ.) ಗುತ್ತಿಗೆ ನೌಕರರ ಸಂಘದ ರಾಜ್ಯ ಮಟ್ಟದ ಸಮುದಾಯ ಆರೋಗ್ಯ ಅಧಿಕಾರಿಗಳ ಸಂರಕ್ಷಣಾ ಸಮಾವೇಶ ಮೈಸೂರಿನಲ್ಲಿ ನಡೆಯಲಿದೆ.
ಫೆ.1ರ ಶನಿವಾರ ಮೈಸೂರಿನ ಮಹಾರಾಜ ಕಾಲೇಜಿನ ಮೈಧಾನದ ಅವರಣದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇರವೇರಿಸಿದ್ದು, ಸಂಘದ ರಾಜ್ಯ ಅಧ್ಯಕ್ಷ ಮಮಿತ್ ಗಾಯಕ್ವಾಡ್ ವಹಿಸಿಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೆ.ಆರ್.ನಗರಲ್ಲಿ ಶಾಸಕ ಡಿ.ರವಿಶಂಕರ್ , ಮಾಜಿ ಸಚಿವ ಎಚ್.ವಿಶ್ವನಾಥ್, ಮತ್ತು ತಾಲೂಕು ಆರೋಗ್ಯಧಿಕಾರಿ ಡಾ.ನಟರಾಜು, ಕೆ.ಆರ್.ನಗರ ಸಾರ್ವಜನಿಕ ಆಡಳಿತಧಿಕಾರಿ ಡಾ.ನವೀನ್ ಸೇರಿದಂತೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಆಸ್ವತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗಳನ್ನ ಸಮುದಾಯ ಆರೋಗ್ಯಾಧಿಕಾರಿಗಳ ತಾಲೂಕು ಅಧ್ಯಕ್ಷ ರಂಗಸ್ವಾಮಿ ನೇತೃತ್ವದಲ್ಲಿ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ರಂಗಸ್ವಾಮಿ ರಾಜ್ಯದ ಎಲ್ಲಾ ಜಿಲ್ಲೆಗಳ ಸಮುದಾಯ ಅರೋಗ್ಯಧಿಕಾರಿಗಳನ್ನು ಒಂದೂಗೂಡಿಸಿ ಈ ಸಮಾವೇಶ ಮಾಡಲಾಗುತ್ತಿದ್ದು ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳಾದ ಕುಪ್ಪೆ ಸಚಿನ್, ಮನೋಜ್ ಕುಮಾರ್ ಮಧುಸೂದನ್, ಸುಮಾ ಮಹೇಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.