Friday, April 11, 2025
Google search engine

Homeರಾಜ್ಯಸುದ್ದಿಜಾಲಫೆ.7 ರಂದು ಒಪಿಎಸ್ ಜಾರಿಗೆ ಆಗ್ರಹಿಸಿ ಹಕ್ಕೊತ್ತಾಯ ಧರಣಿ

ಫೆ.7 ರಂದು ಒಪಿಎಸ್ ಜಾರಿಗೆ ಆಗ್ರಹಿಸಿ ಹಕ್ಕೊತ್ತಾಯ ಧರಣಿ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಎನ್ ಪಿಎಸ್ ಯೋಜನೆಯಡಿ ಬರುವ ರಾಜ್ಯ ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿಗೊಳಿಸಲು ಆಗ್ರಹಿಸಿ ಫೆ.7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಒಂದು ದಿನದ ಹಕ್ಕೊತ್ತಾಯ ಧರಣಿ ಹಮ್ಮಿಕೊಳ್ಳ ಲಾಗಿದೆ ಎಂದು ಕನಾಟಕ ರಾಜ್ಯ ಎನ್ ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಾಲೇಕೊಪ್ಪಲು ಎಸ್.ಆರ್. ಮಂಜುನಾಥ್ ತಿಳಿಸಿದರು.

ಕೆ.ಆರ್.ನಗರ ತಾಲೂಕಿನಲ್ಲಿ ಎನ್.ಪಿ.ಎಸ್.ನೌಕಕರನ್ನು ಭೇಟಿ ನೀಡಿ ಬೆಂಗಳೂರಿನಲ್ಲಿ ನಡೆಯುವ ಧರಣಿಗೆ ಬೆಂಬಲ ಕೋರಿ ಮಾತನಾಡಿದ ಅವರು ಧರಣಿಗೆ ಸರ್ಕಾರಿ ನೌಕರರ ಸಂಘಟನೆಗಳು ಬೆಂಬಲ ನೀಡಬೇಕು ಮತ್ತು ಜಿಲ್ಲೆಯ ನೌಕರರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.

2006ರ ಏ.1 ರಿಂದ ಸರ್ಕಾರಿ ಸೇವೆಗೆ ಸೇರಿರುವ ನೌಕ ರರ ಸಂಧ್ಯಾಕಾಲದ ಬದುಕಿನ ಭದ್ರತೆಯನ್ನು ತಂದು ಕೊಡುವ ನಿಟ್ಟಿನಲ್ಲಿ ಹಾಗೂ ಈಗಾಗಲೇ ಮರಣ ಹೊಂದಿರುವ ಎನ್ ಪಿಎಸ್ ಒಳಪಡುವ ನೌಕರರ ಅವಲಂಬಿತ ಕುಟುಂಬಗಳಿಗೆಮತ್ತು ಎನ್ ಪಿಎಸ್ ಯೋಜನೆ ಅಡಿಯಲ್ಲಿ ನಿವೃತ್ತಿ ಹೊಂದಿ ದಯನೀಯ ಜೀವನ ನಡೆಸುತ್ತಿರುವವರ ನೆರವಿಗೆ ಸರ್ಕಾರ ಒಪಿಎಸ್ ಜಾರಿ ಮೂಲಕ ನಿಲ್ಲಬೇ ಕೆಂದು ಈ ಹಿಂದಿನಿಂದಲೂ ಒತ್ತಾಯ ಮಾಡಲಾಗುತ್ತಿದೆ ಎಂದರು.

ನಂತರ ಕೆ.ಆರ್ ನಗರ ತಾಲೂಕಿನ ಮಾನ್ಯ ಶಾಸಕರಾದ ಡಿ ರವಿಶಂಕರ್ ಹಾಗೂ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಾಕ್ಟರ್ ನಟರಾಜ್ ಇವರಿಗೆ ಭೇಟಿ ಮಾಡಿದ ಎನ್.ಪಿ.ಎಸ್ ಘಟಕದ ಪದಾಧಿಕಾರಿಗಳು ಧರಣಿಗೆ ಬೆಂಬಲ ನೀಡುವಂತೆ ಕೋರಿದರು.

ಈ ತಾಲೂಕು NPS ಘಟಕದ ಗೌರವಾಧ್ಯಕ್ಷರಾದ ಬೋಜೇಗೌಡ, ತಾಲೂಕು ಅಧ್ಯಕ್ಷರಾದ ಎಸ್.ಎನ್. ಮಂಜು, ಪ್ರಧಾನ ಕಾರ್ಯದರ್ಶಿ ಎಸ್.ಕೆ. ಕಿಶೋರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular