ಮೈಸೂರು: ಲಾವಣ್ಯ ಮ್ಯಾಟ್ರಿಮೋನಿಯಂ ಹಾಗೂ ಶಾಶ್ವತ ಸೇವಾ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಇದೇ ಜ.೨೭ರ ಬೆಳಗ್ಗೆ ೧೦ರಿಂದ ಸಂಜೆ ನಾಲ್ಕರವರೆಗೆ ನಗರದ ಪುರಭವನ ಹತ್ತಿರದ ಗೋವರ್ಧನ್ ಹೊಟೇಲ್ ಸತ್ಯಭಾಮಾ ಹಾಲ್‌ನಲ್ಲಿ ಉಚಿತ ವಧು ವರರ ಸಮಾವೇಶ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಲೋಕೇಶ್ ತಿಳಿಸಿದರು.
ವಧು ವರಾನ್ವೇಷಣೆ ವೇಳೆಯ ಸಮಸ್ಯೆ ಅರಿತು ನೆರವಾಗಲೆಂದು ಈ ಸಂಸ್ಥೆ ರಚಿಸಿ, ಈಗ ವಧುವರರ ಸಮಾವೇಶ ಆಯೋಜಿಸಲಾಗಿದೆ. ಇದಕ್ಕೆ ಯಾವುದೇ ಜಾತಿ ನಿರ್ಬಂಧವಿಲ್ಲ. ಯಾವುದೇ ಸಮುದಾಯದವರುಸಹಾ ಪಾಲ್ಗೊಳ್ಳಬಹುದಾಗಿದ್ದು, ಸಂಪೂರ್ಣ ಉಚಿತವಾಗಿದೆ ಎಂದು ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗೆ ದೂ. ೯೧೬೪೭ ೪೩೦೫೯, ೮೮೮೪೩ ೪೭೯೪೯ನ್ನು ಸಂಪರ್ಕಿಸಲು ಕೋರಿದರು.