ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ದಕ್ಷಿಣ ಭಾರತದಲ್ಲಿ ಹೆಸರು ವಾಸಿಯಾಗಿರುವ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವರ ಬ್ರಹ್ಮ ರಥೋತ್ಸವ ಜ.15 ರಂದು ನಡೆಯಲಿದ್ದು ಇದಕ್ಕಾಗಿ ಗ್ರಾಮ ನವ ವಧುವಿನಂತೆ ಶೃಂಗಾರ ಗೊಂಡಿದ್ದು ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ.
ಈಗಾಗಲೇ ರಥೋತ್ಸವದ ಹಿನ್ನಲೆಯಲ್ಲಿ ತಾಲೂಕು ಆಡಳಿತವು ಕೆ.ಆರ್.ನಗರ ದಿಂದ ಲಕ್ಷ್ಮೀನಾರಾಯಣ ದೇವಾಲಯದಿಂದ ಶ್ರೀರಾಮ ದೇವರ ಉತ್ಸವ ಮೂರ್ತಿಗಳನ್ನು ಚುಂಚನಕಟ್ಟೆ ಶ್ರೀರಾಮ ದೇವಾಲಯಕ್ಕೆ ತಂದು ನಿತ್ಯ ವಿವಿಧ ಪೂಜೆ ಪುರಸ್ಕಾರಗಳನ್ನು ಆಯೋಜಿಸಿದೆ.
ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಮಾರನೇಯ ದಿನ ನಡೆಯುವ ಈ ರಥೋತ್ಸವಕ್ಕೆ ಸಕಲ ಸಿದ್ದತೆ ಕೈ ಗೊಳ್ಳಲು ಶಾಸಕ ಡಿ.ರವಿಶಂಕರ್ ಅವರು ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದರಿಂದ ತಾಲೂಕು ಆಡಳಿತ ರಥೋತ್ಸವದ ಯಶಸ್ವಿಗೆ ಕ್ರಮ ಕೈಗೊಳ್ಳುತ್ತಿದೆ.
ಈಗಾಗಲೇ ಕೆ.ಆರ್.ನಗರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಥವನ್ನು ಮತ್ತು ಚಕ್ರಗಳನ್ನು
ಪರಿಶೀಲನೆ ಮಾಡಿ ಸುಸಜ್ಜಿತವಾಗಿದೆ ಎಂದು ವರದಿಯನ್ನು ನೀಡಿರುವುದರಿಂದ ಮುದ್ದನಹಳ್ಳಿ ಗ್ರಾಮದ ಕ್ಷೇತ್ರಪಾಲ ಕುಟುಂಬದವರು ರಥವನ್ನು ಅಲಂಕಾರ ಮಾಡಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ.

ಈಗಾಗಲೇ ರಥೋತ್ಸವದ ಅಂಗವಾಗಿ ಹಾಕಲಾಗಿರುವ ಮಿಠಾಯಿ ಅಂಗಡಿಗಳು, ಕಡ್ಲೆಪುರಿ, ಮಕ್ಕಳ ಆಟಿಕೆ, ಮಹಿಳೆಯರ ಅಲಂಕಾರಿಕ ವಸ್ತುಗಳ ಅಂಗಡಿಗಳು ಸೇರಿದಂತೆ ಇನ್ನಿತರ ಅಂಗಡಿಗಳು ರಥೋತ್ಸವ ದ ಕಳೆ ಕಟ್ಟುವಂತೆ ಮಾಡುತ್ತಿದೆ. ಇನ್ನು ಕುಪ್ಪೆ ಗ್ರಾ.ಪಂ ವತಿಯಿಂದ ಕುಡಿಯುವ ನೀರು, ಸ್ವಚ್ಚತೆಗೆ ಒತ್ತು ನೀಡಲಾಗುತ್ತಿದ್ದು ಇನ್ನು ಕೆ.ಆರ್.ನಗರ ಬಸ್ ಡಿಪೋ ಹೆಚ್ಚಿನ ಬಸ್ ಸಂಚರಿಸಲು ಅಗತ್ಯ ಕ್ರಮ ಕೈಗೊಂಡಿದ್ದು ಜಾತ್ರೆಯಲ್ಲಿ ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆಯ ಕ್ರಮವಾಗಿ ಓರ್ವ ಡಿವೈಎಸ್ಪಿ, 4 ಮಂದಿ ಇನ್ಸ್‌ಪೆಕ್ಟರ್, 8 ಮಂದಿ ಪಿಎಸ್ಐ ಮತ್ತು ಎಸ್.ಎ.ಐ.ಸೇರಿದಂತೆ 150ಕ್ಕು ಅಧಿಕ ಪೊಲೀಸರು ಮತ್ತು ಒಂದು ತುಕಡಿ ಕೆ.ಎಸ್.ಅರ್.ಪಿ.ಸಿಬ್ಬಂದಿ ಪೊಲೀಸರನ್ನ ಭದ್ರತೆಗೆ ನಿಯೋಜನೆಗೆ ಜಿಲ್ಲಾ ಎಸ್.ಪಿ ವಿಷ್ಣುವರ್ಧನ್ ಸಾಹೇಬರಿಗೆ ಮನವಿ ಮಾಡಲಾಗಿದೆ ಎಂದು ಸಾಲಿಗ್ರಾಮ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣರಾಜು ತಿಳಿಸಿದ್ದಾರೆ.
” 15 ರಂದು ರಥೋತ್ಸವ: ಯಾರು ಯಾರು ಬರಲಿದ್ದಾರೆ”
ಧಾರ್ಮಿಕ ದತ್ತಿ ಇಲಾಖೆ ಮತ್ತು ತಾಲೂಕು ಆಡಳಿತ ವತಿಯಿಂದ ಶ್ರೀ ಕೋದಂಡರಾಮ ದೇವರ ಬ್ರಹ್ಮರಥೋತ್ಸವ ಜ.15 ರಂದು ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಬೆಳಗ್ಗೆ 11.5ರಿಂದ 12.5 ಕ್ಕೆ ಬ್ರಹ್ಮರಥೋತ್ಸವ ನಡೆಯಲಿದ್ದು, ಶ್ರೀಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಸ್ವಾಮೀಜಿ, ಕೆ ಆರ್ ನಗರ ಕಾಗಿನೆಲೆ ಶಾಖಾ ಮಠ ಶಿವಾನಂದಪುರಿ ಸ್ವಾಮೀಜಿ, ಬೆಟ್ಟದಪುರ ವಿರಕ್ತ ಮಠ ಚನ್ನಬಸವದೇಶಿಕೇಂದ್ರ ಸ್ವಾಮಿಜಿ, ಕರ್ಪೂರವಳ್ಳಿ ಜಂಗಮ ಮಠ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ.
ಶಾಸಕ ಡಿ.ರವಿಶಂಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಉದ್ಘಾಟಿಸುವರು.ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಉದ್ಘಾಟಿಸುವರು, ಘನ ಉಪಸ್ಥಿತಿ ಕೇಂದ್ರ ಸಚಿವ ಸಂಸದ ಎಚ್.ಡಿ ಕುಮಾರಸ್ವಾಮಿ, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಡಿ.ತಿಮ್ಮಯ್ಯ, ಮುಂಜೇಗೌಡ, ಮಧು ಜಿ.ಮಾದೇಗೌಡ, ಎಸ್.ಯತೀಂದ್ರ, ಕೆ. ವಿವೇಕಾನಂದ, ಆಯುಕ್ತರು ಎಂ.ಸಿ ವೆಂಕಟೇಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿ ಕಾಂತ್ ರೆಡ್ಡಿ, ಉಪವಿಭಾಗಾಧಿಕಾರಿ ವಿಜಯ್ ಕುಮಾರ್, ಇ.ಒ. ರಘು, ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿ ಗಳು ಪಾಲ್ಗೊಳ್ಳುವರು.
” 17 ರಂದು ತೆಪ್ಪೋತ್ಸವ “
ಜನವರಿ 17 ರ ಶುಕ್ರ ವಾರ ಸಂಜೆ ಶ್ರೀರಾಮ ದೇವರ ತೆಪ್ಪೋತ್ಸವ ಅಂದು ಸಂಜೆ 7 ಗಂಟೆಗೆ ಕಾವೇರಿನದಿಯಲ್ಲಿ ವರ್ಣ ರಂಜಿತವಾಗಿ ನಡೆಯಲಿದ್ದು ಈ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸುವಂತೆ ಚುಂಚನಕಟ್ಟೆ ನಾಡಕಚೇರಿಯ ಉಪತಹಸೀಲ್ದಾರ್ ಕೆ.ಜೆ.ಶರತ್, ಶ್ರೀರಾಮ ದೇವಾಲಯದ ಆಡಳಿತಧಿಕಾರಿ ಕೆ.ರಘು , ದೇವಾಲಯದ ಪಾರುಪತ್ತೆದಾರ್ ಯತಿರಾಜ್ ಕೋರಿದ್ದಾರೆ.