ಎಡತೊರೆ ಮಹೇಶ್
ಹೆಚ್.ಡಿ.ಕೋಟೆ: ಹೆಚ್ ಡಿ ಕೋಟೆ ಪಟ್ಟಣದಲ್ಲಿ ಹನುಮಸೇವಾ ಸಮಿತಿ ವತಿಯಿಂದ 6ನೇ ವರ್ಷದ ಹನುಮ ಜಯಂತಿ ಅಂಗವಾಗಿ ಶೋಭಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹನುಮ ಸೇವಾ ಸಮಿತಿ ಅಧ್ಯಕ್ಷ ಡೈರಿ ಶ್ರೀಕಾಂತ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದವರು, ಜನವರಿ 4ರಂದು ಬೆಳಿಗ್ಗೆ ಪಟ್ಟಣದಲ್ಲಿರುವ ಆಂಜುನೇಯ ಸ್ವಾಮಿ ದೇವಸ್ಥಾನದ ಬಳಿಯಲ್ಲಿ ಭಕ್ತರು ಹನುಮ ಮಾಲಾ ಧಾರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ, 5ನೇ ತಾರೀಕು ಶುಕ್ರವಾರ ಬೆಳಗ್ಗೆ 9:30ರ ಶುಭ ಮುಹೂರ್ತದಲ್ಲಿ ಪವನ ಹೋಮ ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ಸಭೆಯಲ್ಲಿ ಭಾಷಣಕಾರರಾದ ಇಲವಾಲ ಶ್ರೀ ವೆಂಕಟರಾಮ ಅವರು ಮಾತನಾಡಲಿದ್ದು, ಮಧ್ಯಾಹ್ನ 1:00ಗೆ ಪ್ರಸಾದ ವಿತರಣೆ ಮಾಡಲಾಗುವುದು.
ಶನಿವಾರ ಹೆಚ್ ಡಿ ಕೋಟೆ ಪಟ್ಟಣದಲ್ಲಿರುವ ಗದಿಗೆ ಸರ್ಕಲ್ ನ ಬಳಿ ಇರುವ ಭಂಡಾರಿ ಅಮ್ಮ ದೇವಸ್ಥಾನದಿಂದ ಪ್ರಾರಂಭಗೊಂಡು ಪರಮಪೂಜ್ಯ ಶ್ರೀ ಶ್ರೀ ಮಹಾದೇವಸ್ವಾಮಿಗಳು ಪಡುವಲ ಮಠ ವಿರಕ್ತ ಮಠ ಬಿಡುಗಲು ಗಣ್ಯರಿಂದ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆಯೊಂದಿಗೆ ಉತ್ಸವ ಮೂರ್ತಿಗೆ ಚಾಲನೆ ನೀಡಿ, ಮಂಗಳ ಮಂಗಳವಾದ್ಯ ನಂದಿ ಕಂಬ, ವೀರಗಾಸೆ, ಚಂಡೆ, ಕಂಸಾಳೆ ಸೇರಿದಂತೆ ಹಲವು ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಪಟ್ಟಣದಲ್ಲಿರುವ ಶ್ರೀ ವರದರಾಜ ಸ್ವಾಮಿ ದೇವಾಲಯದಲ್ಲಿಬಳಿ ಸಮಾವೇಶಗೊಳುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ರಾಜು ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಹನುಮ ಸೇವಾ ಸಮಿತಿ ಅಧ್ಯಕ್ಷ ಡೈರಿ ಶ್ರೀಕಾಂತ್ ಕಾರ್ಯದರ್ಶಿ ರಾಜು ಖಜಾಂಚಿ ಮುತ್ತುರಾಜ್ ಉಪಾಧ್ಯಕ್ಷ ಚಂದ್ರಮೋಳಿ, ಸಲಹಾ ಸಮಿತಿ ಸಂಚಾಲಕಲರಾದ ನಾಗೇಶ್, ಮೋಹನ್ ಕುಮಾರ್, ಮಾಜಿ ಅಧ್ಯಕ್ಷ ನಂದೀಶ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಶಿವರಾಜು ಸದಸ್ಯರಾದ ಎಚ್ ಕೆ ಸುರೇಶ್, ಮೋಹನ್ ಇನ್ನು ಮುಂತಾದವರು ಹಾಜರಿದ್ದರು.