Friday, April 11, 2025
Google search engine

Homeಕ್ರೀಡೆಜೂ.10ರಂದು ಏಕದಿನ ವಿಶ್ವಕಪ್‌ ಕ್ರೀಡಾಕೂಟದ ವೇಳಾಪಟ್ಟಿ ಪ್ರಕಟ

ಜೂ.10ರಂದು ಏಕದಿನ ವಿಶ್ವಕಪ್‌ ಕ್ರೀಡಾಕೂಟದ ವೇಳಾಪಟ್ಟಿ ಪ್ರಕಟ

ಲಂಡನ್‌: ಭಾರತ ಆತಿಥ್ಯ ವಹಿಸಲಿರುವ ಪ್ರಸಕ್ತ ಸಾಲಿನ ಕ್ರಿಕೆಟ್‌ ವಿಶ್ವಕಪ್‌ ಕ್ರೀಡಾಕೂಟದ ವೇಳಾಪಟ್ಟಿ ಜೂ.10ರಂದು ಪ್ರಕಟವಾಗಲಿದೆ ಎಂದು ಕೆಲವು ಕ್ರೀಡಾ ವೆಬ್‌ ಸೈಟ್‌ ಗಳು ವರದಿ ಮಾಡಿವೆ.

ಭಾರತದಲ್ಲಿಯೇ ಅ.5ರಿಂದ ನವೆಂಬರ್‌ 19ರ ವರೆಗೆ ಈ ಕ್ರೀಡಾಕೂಟ ನಡೆಯುವ ಸಾಧ್ಯತೆ ಇದೆ. ಆದರೆ, ಯಾವ ದಿನಾಂಕದಂದು ಯಾವ ಯಾವ ದೇಶಗಳು ಪರಸ್ಪರ ಮುಖಾಮುಖಿಯಾಗಲಿವೆ ಎಂಬುದು ಶನಿವಾರ ಬಹಿರಂಗವಾಗಲಿದೆ. ಸದ್ಯ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಮತ್ತು ಕಾರ್ಯದರ್ಶಿ ಜಯ್‌ ಶಾ ಲಂಡನ್‌ನಲ್ಲಿದ್ದು, ಐಸಿಸಿ ಜತೆ ಸಭೆ ನಡೆಸುತ್ತಿದ್ದಾರೆ.

ಅಲ್ಲದೆ, ಬಿಸಿಸಿಐ ಈಗಾಗಲೇ ಒಂದು ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ. ಇದನ್ನು ಐಸಿಸಿಗೆ ನೀಡಿ ಬಳಿಕ ಫೈನಲ್‌ ಮಾಡಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.

RELATED ARTICLES
- Advertisment -
Google search engine

Most Popular