Sunday, April 20, 2025
Google search engine

Homeಸ್ಥಳೀಯನ.೭, ೮ ಕ್ಕೆ ಸಾರ್ವಕರ್ ಕುರಿತ ನಾಟಕ ಪ್ರದರ್ಶನ

ನ.೭, ೮ ಕ್ಕೆ ಸಾರ್ವಕರ್ ಕುರಿತ ನಾಟಕ ಪ್ರದರ್ಶನ

ಮೈಸೂರು: ನಗರದ ಸಾವರ್ಕರ ಪ್ರತಿಷ್ಠಾನದಿಂದ ಇದೇ ನ.೭ ಹಾಗೂ ೮ ರಂದು ಮೈಸೂರಿನ ಕಲಾಮಂದಿರದಲ್ಲಿ ಸಂ.೪ಕ್ಕೆ ಪ್ರದರ್ಶನವಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಡಾ.ಯಶಸ್ವಿನಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ನಾವರ್ಕರ್ ಜೀವನಾಧಾರಿತ ಕನ್ನಡ ನಾಟಕ ಕರಿನೀರ ವೀರ ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಸದರಿ ನಾಟಕವನ್ನು ರಂಗಾಯಣದ ಮಾಜಿ ನಿರ್ದೇಶಕರಾದ ಅಡ್ಡಂಡ ಪಿ ಕಾರಿಯಪ್ಪರವರು ರಚಿಸಿ ನಿರ್ದೇಶಿಸಿದ್ದಾರೆ.

ಆಯೋಧ್ಯಾ ಪ್ರಕಾಶನವು ನಾಟಕವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದು, ಅದರ ಮಾರಾಟಕ್ಕೂ ಬರಲಿದೆ. ನಾಟಕವು ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಮಂಡ್ಯ ನಗರಗಳಲ್ಲಿ ಒಟ್ಟು ೭ ಪ್ರದರ್ಶನ ಕಂಡಿದ್ದು, ಸಾರ್ವಜರಿಂದ ಮೆಚ್ಚುಗೆಗೆ ಪಾತ್ರವಾದ ನಾಟಕವು ರಾಜ್ಯಾದ್ಯಂತ ೧೦೦ಕ್ಕೂ ಹೆಚ್ಚು ಪ್ರದರ್ಶನ ಏರ್ಪಡಿಸುವ ಗುರಿಯನ್ನು ಸಾವರ್ಕರ್ ಪ್ರತಿಷ್ಠಾನ ಹೊಂದಿದೆ.

೩ ಗಂಟೆಗಳ ಪ್ರದರ್ಶನದಲ್ಲಿ ಸುಮಾರು ೨೦ ಮಂದಿ ಕಲಾವಿದರು ಪ್ರದರ್ಶನ ಮಾಡುತ್ತಿದ್ದಾರೆ. ಸಾವರ್ಕರ್ ಅವರ ಜೈಲು ವಾಸದ ವೇಳೆ ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಚಿತ್ರ ಹಿಂಸೆ, ಸ್ವಾತಂತ್ರ್ಯ ಭಾರತದಲ್ಲಿಯೂ ಅನುಭವಿಸಿದ ಕಷ್ಟ ನಷ್ಟಗಳು ಸಮಾನತೆಗಾಗಿ ನಡೆಸಿದ ಹೋರಾಟಗಳನ್ನು ಕಥಾನಕ ಒಳಗೊಂಡಿದೆ. ವಿರೋಧಿಗಳು ಮಾಡುವ ಟೀಕೆಗಳಿಗೆ ಉತ್ತರವಿದೆ ಎಂದರು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಸವೆಸಿದವರಾಗಿದ್ದಾರೆ. ಅಂಥವರ ಬಗ್ಗೆ ರಾಜಕೀಯ ದುರುದ್ದೇಶದಿಂದ ಪೂರ್ವಗ್ರಹ ಪೀಡಿತರಾಗಿ ಮಾತನಾಡುವ ಜನಗಳು ಸಾವರ್ಕರ್ ಏನು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕೆಂದರು. ಗೋಷ್ಠಿಯಲ್ಲಿ ಪ್ರತಿಷ್ಠಾನ ದ ಖಜಾಂಚಿ ಸಂದೇಶ್, ಸದಸ್ಯ ರಾಕೇಶ ಭಟ್, ಶಿವಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular