ತಾಂಡವಪುರ: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಚಿಕ್ಕಯ್ಯನ ಛತ್ರ ಗ್ರಾಮದ ಬಳಿ ಇರುವ ಇತಿಹಾಸ ಪ್ರಸಿದ್ಧಿ ಹಳೆ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಇಂದು ವಿಶೇಷ ಪೂಜೆ ರಥೋತ್ಸವ ಆರಾಧನ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಈ ದೇವಾಲಯಕ್ಕೆ ಚಿಕ್ಕಯ್ಯನ ಛತ್ರ ಹೋಬಳಿಯ ತಾಂಡವಪುರ, ಬಂಚಹಳ್ಳಿ ಹುಂಡಿ, ಕೆಂಪಿಸಿದ್ದನ ಹುಂಡಿ, ಅಡಕನಹಳ್ಳಿ ಹುಂಡಿ, ಏಚ್ಗಳ್ಳಿ ,ಹಳ್ಳಿ ದಿಡ್ಡಿ, ಚಿಕ್ಕಯ್ಯನ ಛತ್ರ ,ಬಸವನಪುರ, ಹೆಬ್ಯಾ ಕಡಕೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತಾದಿಗಳು ದೇವಾಲಯಕ್ಕೆ ಬಂದು ಪೂಜಿ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಥೋತ್ಸವಕ್ಕೆ ಮಲ್ಲನ ಮೂಲೆ ಮಠಾಧೀಶರಾದ ಚನ್ನಬಸವ ಸ್ವಾಮೀಜಿ ಅವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅರ್ಚಕರಾದ ವೆಂಕಟೇಶ್ ರವರು ಸುದ್ದಿಗಾರರೊಂದಿಗೆ ಮಾತನಾಡಿ ಬೆಳಿಗ್ಗೆಯಿಂದ ದೇವಾಲಯದಲ್ಲಿ ನಡೆದ ದೇವತಾ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.

ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮು, ಅರ್ಕೇಶ್ ಕಿಟ್ಟಿ, ದಕ್ಷಿಣ ಮೂರ್ತಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿ ಬಿಪಿ ಮಹಾದೇವ ಮುಖಂಡರಾದ ಬಿ ಎಂ ನಾಗರಾಜು, ಮನ್ನೇಗೌಡ, ಎಂ ಮಹದೇವ್ ಹುಚ್ಚೇಗೌಡ, ಸಿ ಎನ್ ಚಂದ್ರು ಮುಖಂಡರಾದ ನಾಗಜನಾಯಕ ಮಹದೇವ ಚಾರ್ ಪಂಚಾಯತಿ ಮಾಜಿ ಉಪಾಧ್ಯಕ್ಷ ಮಂಜುನಾಥ್ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರುಗಳು ದೇವಾಲಯದ ಆಡಳಿತ ಮಂಡಳಿಯವರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರ ಸಾಗರವೇ ಹರಿದು ಬಂದಿತ್ತು.