ವರದಿ: ಸತೀಶ್ ಆರಾಧ್ಯ
- ತ್ರೈಮಾಸಿಕ ನಿರ್ವಹಣೆ ಹಿನ್ನೆಲೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ಕಡಿತ
ಪಿರಿಯಾಪಟ್ಟಣ: ಬೈಲಕುಪ್ಪೆ ಹಾಗೂ ಪಿರಿಯಾಪಟ್ಟಣ 66/11 KV ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಡಿ.12 ರ ಗುರುವಾರ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಅಂದು ತಾಲೂಕಿನ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಳ್ಳಲಿದ್ದು ಗ್ರಾಹಕರು ಸಹಕರಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಪಿರಿಯಾಪಟ್ಟಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗುರು ಬಸವರಾಜಸ್ವಾಮಿ ಕೋರಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಪಿರಿಯಾಪಟ್ಟಣ ಟೌನ್, ಮುತ್ತೂರು, ಮಾಲಂಗಿ, ಚೌತಿ, ಚಿಟ್ಟೆನಹಳ್ಳಿ, ಕಂಪಲಾಪುರ, ಕಿರನಲ್ಲಿ, ಪಂಚವಳ್ಳಿ, ದೊಡ್ಡಬೆಲಾಳು, ಬೈಲಕುಪ್ಪೆ, ಚನ್ನಕಲ್, ಕೊಪ್ಪ, ನವಿಲೂರು, ಹುಣಸವಾಡಿ, ಆವರ್ತಿ, ಪೂನಾಡಹಳ್ಳಿ, ಟಿಬೆಟ್ ಕ್ಯಾಂಪ್ ಗ್ರಾಮ ಪಂಚಾಯತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.