Friday, April 4, 2025
Google search engine

Homeದೇಶಕೇರಳಿಗರಿಗೆ ಓಣಂ ಸಂಭ್ರಮ..

ಕೇರಳಿಗರಿಗೆ ಓಣಂ ಸಂಭ್ರಮ..

ಕೇರಳ: ಕೇರಳ ರಾಜ್ಯದ ಪ್ರಸಿದ್ಧ ಹಬ್ಬ ಓಣಂ. ಕೇರಳಿಗರಿಗೆ ಇದು ಸಮೃದ್ಧಿಯ ಸುವರ್ಣ ದಿನಗಳು. ಓಣಂ ಶ್ರಾವಣ ಮಾಸವಾಗಿರುವ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಬರುತ್ತದೆ. ಈ ಹಬ್ಬವನ್ನು ಸುಗ್ಗಿಯ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬದ ಆಚರಣೆಗಳು ಅಥಂ ದಿನದಂದು ಪ್ರಾರಂಭವಾಗಿ ಹತ್ತು ದಿನಗಳಿದ್ದು ಕೊನೆಯ ದಿನ ತಿರುವೋಣಂ ವರೆಗೆ ನಡೆಯುತ್ತದೆ. ಹಬ್ಬದ ಇತಿಹಾಸ ನೋಡುವುದಾದರೆ ರಾಜ ಮಹಾಬಲಿ ತನ್ನ ಪ್ರಜೆಗಳನ್ನು ಭೇಟಿಯಾಗಲು ಈ ಸಮಯದಲ್ಲಿ ಭೂಮಿಗೆ ಬರುತ್ತಾರೆ.

ಹೀಗಾಗಿ ಈ ದಿನಗಳನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಕೇರಳಿಗರೆಲ್ಲರೂ ಹಬ್ಬವನ್ನು ಜಾತಿ, ಧರ್ಮವನ್ನು ಲೆಕ್ಕಿಸದೇ ಒಂದೇ ಭಾವನೆಯಿಂದ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಈ ದಿನ ಬಿಳಿ ವಸ್ತ್ರದ ಸಾಂಪ್ರದಾಯಿಕ ಉಡುಪು ತೊಡುತ್ತಾರೆ. ಓಣಂ ಕೇರಳದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಓಣಂನ ೧೦ ದಿನವೂ ವಿಭಿನ್ನ ರೀತಿಯಾಗಿ ಸಂಪ್ರದಾಯದಂತೆ ಆಚರಿಸುತ್ತಾರೆ.

ಇನ್ನು ಕೊಚ್ಚಿಯ ತೃಕ್ಕಾಕರ ವಾಮನ ಮೂರ್ತಿ ದೇವಸ್ಥಾನದಲ್ಲಿ ಓಣಂ ಹಬ್ಬ ಬಹಳ ಆಡಂಬರ ಭಕ್ತಿಯಿಂದ ನಡೆಯುತ್ತಿದ್ದು, ನೂರಾರು ಭಕ್ತರು ಭೇಟಿ ನೀಡಿ ಪೂಜೆ ಪುರಸ್ಕಾರದಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆ ತಿರುವನಂತಪುರಂನ ಪಜವಂಗಡಿ ಶ್ರೀ ಮಹಾಗಣಪತಿ ದೇವಸ್ಥಾನಕ್ಕೂ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮಲಯಾಳಿಗಳ ಈ ಹಬ್ಬಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಭಾಶಯಗಳನ್ನು ಕೋರಿದ್ದಾರೆ.

RELATED ARTICLES
- Advertisment -
Google search engine

Most Popular