ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಉನ್ನತ ಹುದ್ದೆಗೆ ಏರಬೇಕೆಂಬ ಕನಸು ಕಟ್ಟಿಕೊಳ್ಳಬೇಕು ಆಗ ಮಾತ್ರ ಮಕ್ಕಳು ಶಿಕ್ಷಣದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಬಾಲಜಗತ್ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜಿನ ವಾರ್ಷಿಕೋತ್ಸವದ ವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು. ತಮ್ಮ ಮಕ್ಕಳ ಶಿಕ್ಷಣ ಕೊಡಿಸಿದರೇ ಸಾಲದು ಅವರಿಗೆ ಸುಸಂಸ್ಕೃತ ಕಲಿಸಿ ಕೊಡಬೇಕು ಈ ಮೂಲಕ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಏಳಿಗೆ ಮುಂದಾಗಬೇಕೆಂದರು.
ಸಾಲಿಗ್ರಾಮ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣರಾಜು ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದರೇ ಸಾಲದು ಅವರು ಅಪರಾಧ ಚಟುವಟಿಕೆಗಳಿಗೆ ಪಾಲ್ಗೊಳ್ಳದಂತೆ ಎಚ್ಚರ ವಹಿಸಿ ಬೇಕು ಇದರಿಂದ ಯುವ ಜನಜನತೆ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದಂತೆ ಆಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ ದೇಶಾದ್ಯಂತ ಪ್ರಾಥಮಿಕ ಶಿಕ್ಣಣ ದಿಂದ ಹಿಡಿದು ಉತ್ನತ ಶಿಕ್ಷಣಕ್ಕೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ತನ್ನದೇ ಕೊಡುಗೆ ನೀಡಿದ್ದು ಲಕ್ಷಾಂತರ ಮಂದಿಯ ಬದುಕಿನ ದಾರಿ ದೀಪವಾಗಿದೆ ಇದರಿಂದ ಇಲ್ಲಿ ಓದಿದವರು ಎಲ್ಲಾ ಇಲಾಖೆಗಳಲ್ಲಿ ಉನ್ನತ ಹುದ್ದೆಗಳೇ ಏರಲು ಸಾಧ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯ ಅತ್ಯುತ್ತಮ ವಿದ್ಯಾರ್ಥಿಗಳು, ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪೋಷಕರಿಗೆ ತಹಸೀಲ್ದಾರ್ ನರಗುಂದ್ ಬಹುಮಾನ ವಿತರಿಸಿ ಮಾತನಾಡಿದರು.

ಆನಂತರ ವಿದ್ಯಾರ್ಥಿಗಳು ನಡೆಸಿ ಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನೃತ್ಯಗಳು, ಪೋಷಕರು ಮತ್ತು ನೆನದಿದ್ದವರ ಮನಸೂರೆ ಗೊಂಡವು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಮಾಜಿ ನಿರ್ದೇಶಕ ಬಂಡಹಳ್ಳಿ ಕುಚೇಲ್,
ಮಿರ್ಲೆ ಮಿಥಿಲಾ ಶಾಲೆಯ ಕಾರ್ಯದರ್ಶಿ ಲೋಕನಾಥ್, ಮುಖಂಡರಾದ ಬಾಲೂರು ನಂಜುಡೇಗೌಡ , ಸಂಪತ್ ಕುಮಾರ್, ನಿವೃತ್ತ ಎಇಇ ಕೆಬಿ ಪ್ರಕಾಶ್, ಉಪತಹಸೀಲ್ದಾರ್ ಕೆ.ಜೆ.ಶರತ್, ಪಾರುಪತ್ತೆದಾರ್ ಯತಿರಾಜ್, ವಿಎ ಮೌನೇಶ್, ಶಿಕ್ಷಣ ಸಂಯೋಜಕ ದಾಸಪ್ಪ, ಮಠದ ವ್ಯವಸ್ಥಾಪಕ ರಾಮಲಿಂಗಪ್ಪ , ಪ್ರಾಂಶುಪಾಲ ಚಿಕ್ಕಾಡೆ ಮಹೇಶ್, ಮುಖ್ಯ ಶಿಕ್ಷಕಿ ಚಾಂದಿನಿ, ಶಿಕ್ಷಕರಾದ ಗಿರೀಶ್, ಸತ್ಯನಾರಾಯಣ್, ಪುಷ್ವವತಿ , ಸುನೀತಾ, ನಮ್ರತಾ, ಗೋವಿಂದನಾಯಕ್ ,ನಾಗಪ್ಪ, ಸೌಮ್ಯ, ಬಾಬು ಅರಗಂಜಿ, ದೇವರಾಜು, ಹರ್ಷಿತಾ, ಪುಷ್ವಲತಾ, ಹಾಡ್ಯಲತಾ ಮಲ್ಲಿಕಾರ್ಜುನ, ಶಶಿಕಾಂತ್, ಸುಮ, ಶುಭಾಷಿಣಿಸತೀಶ್, ನಿರ್ಮಲ, ಸಾಂಗಾವಿ ಆನಂತಕುಮಾರ್ ಬಾಬು,
ದೈಹಿಕ ಶಿಕ್ಷಕರಾದ ಪವಿತ್ರ, ಲಕ್ಷ್ಮಣೇಗೌಡ ಸೇರಿದಂತೆ ಮತ್ತಿತರು ಹಾಜರಿದ್ದರು.