ವಿಜಯಪುರ : ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ ʼಒಂದು ದೇಶ ಒಂದು ಚುನಾವಣೆʼ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಶುಕ್ರವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಪಕ್ಷದ ರಾಷ್ಟ್ರೀಯ ನಾಯಕರು ವಿರೋಧಿಸಿದ್ದಾರೆ. ಇದೆಲ್ಲ ಸಣ್ಣ ಸಣ್ಣ ಪಕ್ಷಗಳನ್ನು ಮುಗಿಸುವ ತಂತ್ರ. ಬೇರೆ ಬೇರೆ ರಾಜ್ಯಗಳಲ್ಲಿ ಬಿಜೆಪಿಗೆ ಸೀಟ್ ಬರುತ್ತಿಲ್ಲ, ಹಾಗಾಗಿ ಸಣ್ಣ ಪಕ್ಷಗಳನ್ನು ಮುಗಿಸುವ ಯತ್ನ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.
ಕೆಲವು ರಾಜ್ಯಗಳಲ್ಲಿ ಈಗಷ್ಟೇ ಚುನಾವಣೆಯಾಗಿದೆ, ಕೆಲವು ಕಡೆ ಚುನಾವಣೆ ನಡೆದು ಒಂದೂವರೆ ವರ್ಷ-ಎರಡೂವರೆ ವರ್ಷ ಆಗಿದೆ. ಅವುಗಳಿಗೆ ಹೇಗೆ ನಿಯಮ ಮಾಡುತ್ತಾರೋ ಗೊತ್ತಿಲ್ಲ ನನ್ನ ಪ್ರಕಾರ ಇದು ಕಷ್ಟ ಎಂದರು.