Monday, April 21, 2025
Google search engine

Homeರಾಜ್ಯಆಧ್ಯಾತ್ಮಕ ಜ್ಞಾನ ಹಾಗೂ ಚಾಣಾಕ್ಷತೆಯಲ್ಲಿ ಶ್ರೀಕೃಷ್ಣನಂತೆ ಇರಬೇಕು: ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್

ಆಧ್ಯಾತ್ಮಕ ಜ್ಞಾನ ಹಾಗೂ ಚಾಣಾಕ್ಷತೆಯಲ್ಲಿ ಶ್ರೀಕೃಷ್ಣನಂತೆ ಇರಬೇಕು: ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್

ದಾವಣಗೆರೆ: ಶ್ರೀ ಕೃಷ್ಣ ಪರಮಾತ್ಮನಂತೆ ಬಹುಸ್ವರೂಪಿ, ಆಧ್ಯಾತ್ಮಕ, ಭಕ್ತಿ, ಜ್ಞಾನ, ಹಾಗೂ ಚಾಣಾಕ್ಷತೆಯಲ್ಲಿ ಹೊಂದಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ತಿಳಿಸಿದರು.

ಬುಧವಾರ(ಸೆ.6) ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಯಾದವ ಸಮಾಜದವರು ವಾಸಿಸುವ 39 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದು, ಜಗಳೂರು ತಾಲ್ಲೂಕು ಒಂದರಲ್ಲಿಯೇ 19 ಕ್ಕಿಂತ ಹೆಚ್ಚು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳಿಗೆ ಮಹಾಭಾರತದ ಮಹಾಕಾವ್ಯದಲ್ಲಿನ ಇರುವ ಹೆಸರುಗಳನ್ನೆ ಗ್ರಾಮಗಳಿಗೆ ಇಡಲು ಪ್ರಯತ್ನಿಸಲಾಗುತ್ತದೆ. ಇದಲ್ಲದೇ ಬಾಕಿ ಉಳಿದ ಗ್ರಾಮಗಳನ್ನೂ ಸಹ ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುತ್ತದೆ. ಯಾದವ ಸಮುದಾಯ ಸೇರಿದಂತೆ ಧ್ವನಿ ಇಲ್ಲದ ಸಮುದಾಯಗಳನ್ನು ಗಮನದಲ್ಲಿಸಿರಿ ಅವರ ಅಭಿವೃದ್ದಿಗೂ ಸಹಕರಿಒಸಲಾಗುತ್ತದೆ ಎಂದರು.

RELATED ARTICLES
- Advertisment -
Google search engine

Most Popular