ಧಾರವಾಡ : ಕಲ್ಲು ಗಣಿ ಗುತ್ತಿಗೆದಾರರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಗಳನ್ನು ಮತ್ತು ಒನ್ ಸ್ಟೇಟ್ ಒನ್ ಜಿಪಿಎಸ್ ಕುರಿತು ಸಮಗ್ರವಾಗಿ ಮಾಹಿತಿ ನೀಡಿ, ಅದನ್ನು ಸದ್ಬಳಕೆಯನ್ನು ಮಾಡಿಕೊಳ್ಳುವಂತೆ ಹಿರಿಯ ಭೂವಿಜ್ಞಾನಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಡಾ. ಉಮೇಶ .ಎಂ. ಬುಗರಿ ಅವರು ಹೇಳಿದರು.
ನಗರದ ಆಲೂರ ವೆಂಟಕರಾವ್ ಸಭಾ ಭವನದಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಬಳ್ಳಾರಿ ಡಿಜಿಎಂಎಸ್ ಇವರ ಸಹಯೋಗದೊಂದಿಗೆ ಕಲ್ಲು ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಮಾಲೀಕರಿಗೆ ಗಣಿ ಮತ್ತು ಭೂವಿಜ್ಞಾನ ಕಾಯ್ದೆ ಮತ್ತು ನಿಯಮಗಳು, ಗಣಿ ಸುರಕ್ಷತೆ ವಿಧಾನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಿ.ಜಿ.ಎಂ.ಎಸ್ ಬಳ್ಳಾರಿ ವಿಭಾಗದ ನಿರ್ದೇಶಕ ಯೊಹಾನ್ ಏಜರ್ಲಾ ಮಾತನಾಡಿ, ಇಲಾಖೆಯ ಕಾಯ್ದೆ ಮತ್ತು ನಿಯಮಗಳ ಕುರಿತು ಸಮಗ್ರವಾದ ಮಾಹಿತಿಯನ್ನು ನೀಡಿ ತಿಳುವಳಿಕೆ ಮೂಡಿಸಿದರು. ಬದಲಾದ ಇಂದಿನ ವ್ಯವಸ್ಥೆಯಲ್ಲಿ ಭೂವಿಜ್ಞಾನ ಇಲಾಖೆಯ ಕಾಯ್ದೆ ನಿಯಮಗಳನ್ನು ತಿಳಿದುಕೊಂಡು ಗಣಿ ಸುರಕ್ಷತೆಯ ವಿಧಾನಗಳ ಬಗ್ಗೆ ತಿಳುವಳಿಕೆ ಪಡೆಯುವುದು ಅವಶ್ಯಕ ಎಂದರು.
ಉಪನಿರ್ದೇಶಕರಾದ ನಾಗೇಂದ್ರ ಕುಮಾರ್ ಶ್ರೀರಾವi,, ಇಲಾಖೆಯ ಮಹೇಶ ಎಮ್. ಗೌಡ ನಾಯಕ, ಬಿಂದನ ಪ. ಪಾಟೀಲ್, ಮೋಹನ್ .ಎಸ್., ಸುನೀಲ್ .ಹೆಚ್. ಕವಠೇಕರ್, ಕರ್ನಾಟಕ ಪಟ್ಟಾ ಲ್ಯಾಂಡ್ ಕ್ವಾರಿ ಮತ್ತು ಜಲ್ಲಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ವ್ಹಿ.ಎಸ್. ಪಾಟೀಲ್, ಜಿಲ್ಲಾ ಸ್ಟೋನ್ ಕ್ರಷರ್ ಮತ್ತು ಕಲ್ಲುಗಣಿಗಾರಿಕೆ ಸಂಘಗಳ ಸಂಯುಕ್ತ ಸಂಘದ ಧಾರವಾಡ ಅಧ್ಯಕ್ಷ ಕಲ್ಲಪ್ಪ ಹಟ್ಟಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಸವರಾಜ .ಹೆಚ್. ಕುಕನೂರ ನಿರೂಪಿಸಿದರು.