ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ ಹಿನ್ನಲೆ ಕಾಂಗ್ರೆಸ್ ಸರ್ಕಾರದ ಸಾಧನೆಯ ಅಂಕಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಗ್ರೇಡ್ ಕೊಟ್ಟು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಭಿನ್ನ ವ್ಯಂಗ್ಯ ಅಂಕಪಟ್ಟಿಯನ್ನು ಮಂಡ್ಯ ಬಿಜೆಪಿ ಕಾರ್ಯಕರ್ತರು ಬಿಡುಗಡೆ ಮಾಡಿದ್ದು, ಶೂನ್ಯ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ.

ಮಂಡ್ಯ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಂಕಪಟ್ಟಿ ಬಿಡುಗಡೆ ಮಾಡಲಾಗಿದ್ದು, ಉದ್ಯೋಗ ಸೃಷ್ಟಿ ಪರೀಕ್ಷೆಯಲ್ಲಿ ‘ಡಿ’ ಗ್ರೇಡ್, ರಕ್ಷಣಾ ಪರೀಕ್ಷೆಯಲ್ಲಿ ‘ಸಿ’ ಗ್ರೇಡ್. ಆರೋಗ್ಯ ಪರೀಕ್ಷೆಯಲ್ಲಿ ‘ಸಿ’ ಗ್ರೇಡ್. ಆರ್ಥಿಕ ಪರೀಕ್ಷೆಯಲ್ಲಿ ‘ಎಫ್’ ಗ್ರೇಡ್. ಮಹಿಳಾ ಸುರಕ್ಷತೆ ಪರೀಕ್ಷೆಯಲ್ಲಿ ‘ಸಿ’ ಗ್ರೇಡ್, ಸ್ಟೋರಿ ಟೆಲ್ಲಿಂಗ್‌ನಲ್ಲಿ ‘ಎ + +’ ಹಾಗೂ ಫೈನಲ್ ಗ್ರೇಡ್ ‘ಡಿ’ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಒಂದು ವರ್ಷದ ಪರೀಕ್ಷೆಯಲ್ಲಿ ಸಂಪೂರ್ಣ ಫೇಲ್ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ವಿಫಲವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡದೆ, ಗ್ಯಾರಂಟಿ ನೆಪದಲ್ಲಿ ಬೊಕ್ಕಸ ಬರಿದು ಮಾಡಿ ನಿಂತ ನೀರಾಗಿದೆ. ನಂಬಿ ಮತ ಹಾಕಿದ ಮತದಾರರ ಕಿವಿಗೆ ಹೂವಿಟ್ಟಿದೆ ಎಂದು ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದಾರೆ.