Monday, April 28, 2025
Google search engine

Homeಅಪರಾಧಕೋಲಾರದಲ್ಲಿ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಬಯಲು: ಒಬ್ಬನ ಬಂಧನ

ಕೋಲಾರದಲ್ಲಿ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಬಯಲು: ಒಬ್ಬನ ಬಂಧನ

ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ನಗರದಲ್ಲಿ ಆನ್ಲೈನ್ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಸೈಯದ್ ಸಾದಿಕ್ ಎಂಬಾತನನ್ನು ಸೆನ್ (ಸೈಬರ್ ಅಪರಾಧ ಹಾಗೂ ಮಾದಕ ವಸ್ತು ನಿಯಂತ್ರಣ) ಪೊಲೀಸರು ಬಂಧಿಸಿದ್ದಾರೆ.

ನೂಕಲಬಂಡೆ ನಿವಾಸಿಯಾದ ಸಾದಿಕ್ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು. ಆತ ನಗದು ಹಾಗೂ ಆನ್‌ಲೈನ್ ಮೂಲಕ ಹಣ ಸಂಗ್ರಹಿಸಿ ಬೆಟ್ಟಿಂಗ್ ಅಪ್ಲಿಕೇಶನ್‌ಗಳಿಂದ ದಂಧೆ ನಡೆಸುತ್ತಿದ್ದ. ಪೊಲೀಸರು ಆರೋಪಿಯಿಂದ ಎರಡು ಮೊಬೈಲ್‌ಗಳು, ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ₹32,046 ಹಣವನ್ನು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಸೇರಿರಬಹುದೆಂಬ ಶಂಕೆಯಿದ್ದು, ತನಿಖೆ ಮುಂದುವರೆದಿದೆ.

ಜಿಲ್ಲಾ ಎಸ್‌ಪಿ ನಿಖಿಲ್ ಬಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಸಾರ್ವಜನಿಕರು ಇಂತಹ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular