ಬೆಂಗಳೂರು: 2025-26ನೇ ಸಾಲಿನ ಅಗ್ನಿವೀರ್ ನೇಮಕಾತಿ ರ್‍ಯಾಲಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಆಸಕ್ತರಿಗೆ ಏಪ್ರಿಲ್ 25ರವರೆಗೆ ಅವಕಾಶ ನೀಡಲಾಗಿದೆ.
ಕರ್ನಾಟಕದ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ವಿವಿಧ ಅಗ್ನಿವೀರ್ ಹುದ್ದೆಗಳಾದ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಕಚೇರಿ ಸಹಾಯಕ/ಸ್ಟೋರ್ ಕೀಪರ್, ಟ್ರೇಡ್ಮನ್ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಹುದ್ದೆಗನುಗುಣವಾಗಿ ಕನಿಷ್ಠ ಶೈಕ್ಷಣಿಕ ಅರ್ಹತೆ 8ನೇ ತರಗತಿಯಿಂದ 10ನೇ ತರಗತಿವರೆಗೆ ಬೇಡಿಕೆಯಿದೆ.
ವಿವರವಾದ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗಾಗಿ ಅಧಿಕೃತ ವೆಬ್‌ಸೈಟ್ www.joinindianarmy.nic.in ನಲ್ಲಿ ಖಾತೆ ರಚಿಸಿ, ಅಗತ್ಯ ವಿವರಗಳನ್ನು ನೀಡಬೇಕು.
ನೋಂದಣಿ ಪ್ರಕ್ರಿಯೆಯಲ್ಲಿ ಸಮಸ್ಯೆ ಎದುರಾದರೆ, ಅಭ್ಯರ್ಥಿಗಳು ತಮ್ಮ ಜಿಲ್ಲೆಗೆ ಸಮೀಪವಿರುವ ನೇಮಕಾತಿ ಕಚೇರಿಗಳನ್ನು ಸಂಪರ್ಕಿಸಬಹುದು. ಬೆಂಗಳೂರು ಕಚೇರಿ: 080-29516517, ಮಂಗಳೂರು ಕಚೇರಿ: 082-42951279, ಬೆಳಗಾವಿ ಕಚೇರಿ: 0831-2950001.
ಇಮೇಲ್ ಮೂಲಕ ಸಹ ಸಹಾಯ ಪಡೆಯಬಹುದು:
- arobgm4@gmail.com (ಬೆಳಗಾವಿ)
- aromangalore@gmail.com (ಮಂಗಳೂರು)
- arobengaluru@gmail.com (ಬೆಂಗಳೂರು)
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ ನೋಡಿ.