Friday, April 11, 2025
Google search engine

Homeರಾಜ್ಯಸುದ್ದಿಜಾಲನಮ್ಮ ಎಲ್ಲಾ ಸಂಕಷ್ಟಗಳನ್ನು ಪರಿಹರಿಸಲು ದೇವರಿಂದ ಮಾತ್ರ ಸಾಧ್ಯ: ದೊಡ್ಡಸ್ವಾಮೇಗೌಡ

ನಮ್ಮ ಎಲ್ಲಾ ಸಂಕಷ್ಟಗಳನ್ನು ಪರಿಹರಿಸಲು ದೇವರಿಂದ ಮಾತ್ರ ಸಾಧ್ಯ: ದೊಡ್ಡಸ್ವಾಮೇಗೌಡ

ಅನ್ನ ಸಂತಪಣೆ ಕಾರ್ಯಕ್ಕೆ ಚಾಲನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಜನರು ಧರ್ಮ ಮತ್ತು ಧಾರ್ಮಿಕತೆಯಲ್ಲಿ ನಂಬಿಕೆ ಇಟ್ಟು ಆಗಾಗ ದೇವಾಲಯಗಳಿಗೆ ಭೇಟಿ ನೀಡಿ ಭಗವಂತನನ್ನು ಪ್ರಾರ್ಥಿಸಿ ಮನಸ್ಸನ್ನು ಶಾಂತಚಿತ್ತರಾಗಿ ಇಟ್ಟುಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.

ಪಟ್ಟಣದ ಪುರಸಭೆ ಬಯಲು ರಂಗಮಂದಿರದ ಅವರಣದಲ್ಲಿ ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಶುಕ್ರವಾರ ನಡೆದ ಅನ್ನ ಸಂತಪಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ಎಲ್ಲಾ ಸಂಕಷ್ಟಗಳನ್ನು ಪರಿಹರಿಸಲು ದೇವರಿಂದ ಮಾತ್ರ ಸಾಧ್ಯ ಎಂದರು.

ಸಮಾಜದಲ್ಲಿ ಸರ್ವರೂ ಪರಸ್ಪರ ಸಹೋದರ ಭಾವನೆಯಿಂದ ಬದುಕಿ ಉತ್ತಮ ಸಮಾಜ ನಿರ್ಮಿಸಿ ಇತರರಿಗೆ ಮಾದರಿಯಾಗಬೇಕೆಂದು ಸಲಹೆ ನೀಡಿದ ಅವರು ದ್ವೇಷ ಮತ್ತು ಅಸೂಯೆ ಭಾವನೆ ಬಿಟ್ಟು ವೈಶಾಲ್ಯ ಮನೋಭಾವದಿಂದ ಜೀವನ ನಡೆಸಬೇಕೆಂದರು. ಕೆ. ಆರ್. ನಗರ ಪಟ್ಟಣದ ಪುರಸಭೆ ಬಯಲು ರಂಗಮಂದಿರದಲ್ಲಿ ಕಳೆದ 62 ವರ್ಷಗಳಿಂದ ಗಣಪತಿ ಸೇವಾ ಸಮಿತಿಯವರು ನಿರಂತರವಾಗಿ ವಿಘ್ನ ನಿವಾರಕನ ಪ್ರತಿಷ್ಠಾಪನೆ ಮಾಡಿಕೊಂಡು ಇದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಮಾಜಮುಖಿ ಕೆಲಸ ಮಾಡುತ್ತಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು.

ಇಲ್ಲಿ ಗಣಪತಿ ಪ್ರತಿಷ್ಠಾಪನೆ ಮತ್ತು ಉತ್ಸವವನ್ನು ಆಡಂಬರ ಮತ್ತು ತೋರಿಕೆಗೆ ಮಾಡದೆ ಶ್ರದ್ದಾ ಭಕ್ತಿಗಳಿಂದ ಆಚರಿಸಿ ಇದರೊಂದಿಗೆ ಅನ್ನ ಸಂತರ್ಪಣೆ ಸೇರಿದಂತೆ ಜನಮುಖಿ ಕೆಲಸ ಮಾಡುತ್ತಿರುವ ಎಲ್ಲರಿಗೂ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು ಇವರ ಉತ್ತಮ ಕೆಲಸಗಳಿಗೆ ನಾನು ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆಂದು ಭರವಸೆ ನೀಡಿದರು.

ನವ ನಗರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ. ಎನ್. ಬಸಂತ್ ಮಾತನಾಡಿ ನಮ್ಮೂರಿನ ಪುರಸಭೆ ಬಯಲು ರಂಗಮಂದಿರದಲ್ಲಿ ಪ್ರತಿಷ್ಠಾಪಿಸುವ ಗಣೇಶೋತ್ಸವ ಜಿಲ್ಲೆಯಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದು ಇಂತಹ ಕೆಲಸ ಮಾಡುತ್ತಿರುವ ಸಮಿತಿಯವರು ಅಭಿನಂದನೆಗೆ ಅರ್ಹರು ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್ ಕುಮಾರ್ ಮಾತನಾಡಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರತಿ ವರ್ಷ 42 ದಿನಗಳ ಕಾಲ ಮಹಾ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅಷ್ಟು ದಿನಗಳು ವಿವಿಧ ವಿಭಿನ್ನ ಕಾರ್ಯಕ್ರಮವನ್ನು ನಡೆಸುತ್ತಿರುವ ಎಲ್ಲರಿಗೂ ಭಗವಂತ ಆಶೀರ್ವದಿಸಲಿ ಎಂದು ಹಾರೈಸಿದರು.

ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳಾದ ತಮ್ಮನಾಯ್ಕ, ಹೆಚ್.ಸಿ.ರಾಜು, ಮಂಜುನಾಥ್, ನಾಗರಾಜನಾಯಕ, ಸತೀಶ್, ಯೋಗಾನಂದ, ಗಣಪತಿರವಿ, ಕೃಷ್ಣಮೂರ್ತಿ, ಕೃಷ್ಣ, ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯ, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಮುಖಂಡ ತೋಂಟದಾರ್ಯ, ವ್ಯಾನ್ ಚಾಲಕರು ಮತ್ತು ಮಾಲೀಕರು ಇದ್ದರು.

RELATED ARTICLES
- Advertisment -
Google search engine

Most Popular