ಪಿರಿಯಾಪಟ್ಟಣ: ಚುನಾವಣಾ ಪೂರ್ವ ಗ್ಯಾರಂಟಿ ಯೋಜನೆ ಕಾರ್ಡ್ ಬೇಡ ಎನ್ನುತ್ತಿದ್ದ ಬಿಜೆಪಿ ಜೆಡಿಎಸ್ ನವರು ಯೋಜನೆ ಜಾರಿ ಬಳಿಕ ಫಲಾನುಭವಿಯಾಗಿರುವುದರಿಂದ ಅವರ ಮೇಲೆ ಕಾಂಗ್ರೆಸ್ ಋಣವಿದೆ ಮುಂದಿನ ದಿನಗಳಲ್ಲಿ ಬೆಂಬಲ ನೀಡಿ ಎಂದು ಪಶುಸಂಗೋಪನೆ ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಪಿರಿಯಾಪಟ್ಟಣ ಹಾಗು ಬೆಟ್ಟದಪುರ ವಿಭಾಗ ವತಿಯಿಂದ ನಡೆದ ಗೃಹಜೋತಿ ಯೋಜನೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಚುನಾವಣಾ ಪೂರ್ವ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ ನುಡಿದಂತೆ ನಡೆದು ಪ್ರಧಾನಿ ಸೇರಿದಂತೆ ಬಿಜೆಪಿ ಅಧ್ಯಕ್ಷರು ಹಾಗೂ ಜೆಡಿಎಸ್ ನವರು ಮಾಡುತ್ತಿದ್ದ ಟೀಕೆಗಳಿಗೆ ತಕ್ಕ ಉತ್ತರ ನೀಡಿ ದೇಶಕ್ಕೆ ಕರ್ನಾಟಕ ರಾಜ್ಯ ಮಾದರಿಯಾಗಿದೆ, ಹಿಂದುಳಿದ ಅಲ್ಪಸಂಖ್ಯಾತ ಬಡವರ ಅಭಿವೃದ್ಧಿಪರ ಚಿಂತಿಸುವುದು ಕಾಂಗ್ರೆಸ್ ಪಕ್ಷ ಮಾತ್ರವಾಗಿರುವುದರಿಂದ ಕಾರ್ಯಕರ್ತರು ನಮ್ಮ ಜನಪರ ಯೋಜನೆಗಳ ಬಗ್ಗೆ ಧೈರ್ಯದಿಂದ ವಿರೋಧಿಗಳಿಗೆ ತಿಳಿಸುವುದರ ಮೂಲಕ ಮುಂದಿನ ದಿನಗಳಲ್ಲಿ ನಮ್ಮನ್ನು ಬೆಂಬಲಿಸುವಂತೆ ಹೇಳಿ ಎಂದರು.