Monday, May 12, 2025
Google search engine

Homeರಾಜ್ಯಆಪರೇಷನ್ ಸಿಂಧೂರ್ : ಸೈನಿಕರಿಗೆ ಬೆಂಬಲ ಸೂಚಿಸಲು ಇಂದು ಕಾಂಗ್ರೆಸ್‌ ನಿಂದ ತಿರಂಗಾ ಯಾತ್ರೆ

ಆಪರೇಷನ್ ಸಿಂಧೂರ್ : ಸೈನಿಕರಿಗೆ ಬೆಂಬಲ ಸೂಚಿಸಲು ಇಂದು ಕಾಂಗ್ರೆಸ್‌ ನಿಂದ ತಿರಂಗಾ ಯಾತ್ರೆ

ಬೆಂಗಳೂರು : ಪಹಲ್ಗಾಮ್ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಯೋಧರಿಗೆ ಬೆಂಬಲ ಸೂಚಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಪಕ್ಷಾತೀತವಾಗಿ ಶುಕ್ರವಾರ ಬೆಂಗಳೂರಿನಲ್ಲಿ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಕೆ.ಆರ್.ವೃತ್ತದಿಂದ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಇರುವ ಮಿನ್ಸ್‌ಸ್ಟ್‌ರ್‌ವರೆಗೆ ಬೃಹತ್ ತಿರಂಗಾ ಯಾತ್ರೆ ನಡೆಯಲಿದೆ. ಈ ವೇಳೆ ಎಲ್ಲಾ ಸಚಿವರು, ಶಾಸಕರು, ಕೆಪಿಸಿಸಿ ಮುಂಚೂಣಿ ಘಟಕಗಳ ಪದಾಧಿಕಾರಿ ಗಳು, ಯುವ ಕಾಂಗ್ರೆಸ್ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಪಕ್ಷ ಸೂಚಿಸಿದೆ.

ಸಾರ್ವಜನಿಕರಿಗೂ ಕರೆ 

ಪಕ್ಷದ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರ ಜೊತೆಗೆ ‘ದೇಶಪ್ರೇಮ ಮೆರೆಯೋಣ, ಐಕ್ಯತೆ ಸಾರೋಣ’ ಎಂಬ ಘೋಷವ್ಯಾಕ್ಯ ದಡಿ ಸರ್ಕಾರಿ, ಖಾಸಗಿ ನೌಕರರು, ಚಿತ್ರರಂಗದವರು, ಪಕ್ಷ ಭೇದ ಮರೆತು ಎಲ್ಲಾ ಸಾರ್ವಜನಿಕರು ಭಾಗವಹಿಸ ಬೇಕೆಂದು ಕರೆ ನೀಡಿದೆ. ಪಕ್ಷದ ಕಾಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಡ್ಡಾಯವಾಗಿ ಭಾರತದ ಧ್ವಜ ಮಾತ್ರ ಪ್ರದರ್ಶಿಸುವಂತೆ ಸೂಚನೆ ನೀಡಲಾಗಿದೆ.

ಬೆಂಬಲ ಪ್ರತಿಯೊಬ್ಬರ ಕರ್ತವ್ಯ

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ಬೆಂಬಲ ನೀಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿಲ್ಲಿ ಸಾಹಿತಿಗಳು, ಚಿಂತಕರು, ವಿದ್ಯಾರ್ಥಿಗಳು, ಮಹಿಳೆಯರು, ಸರ್ಕಾರಿ ಮತ್ತು ಖಾಸಗಿ ಉದ್ದಿಮೆಗಳ ನೌಕರರು, ಸಂಘ ಸಂಸ್ಥೆಗಳು, ಚಲನಚಿತ್ರರಂಗದವರು ಸೇರಿ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದರು.

ಹೀಗಿರಲಿದೆ ಕೈ ಯಾತ್ರೆ

* ಸಿಎಂ ಸಿದ್ದರಾಮಯ್ಯ ನೇತೃತ್ವ ದಲ್ಲಿ ಕಾರ್ಯಕ್ರಮ ಆಯೋಜನೆ

* ಕೆ.ಆ‌ರ್.ವೃತ್ತದಿಂದ ಮಿನ್ಸ್ ಸೈರ್‌ವರೆಗೆ ನಡೆಯಲಿದೆ ಬೃಹತ್ ತಿರಂಗಾ ಯಾತ್ರೆ

* ಶಾಸಕರು, ಕಾಂಗ್ರೆಸ್ ಪದಾಧಿಕಾರಿ ಗಳಿಗೆ ಕಡ್ಡಾಯ ಹಾಜರಿಗೆ ಸೂಚನೆ

* ಸರ್ಕಾರಿ, ಖಾಸಗಿ ನೌಕರರಿಗೂ ಭಾಗಿಯಾಗುವಂತೆ ಕರೆ

* ಯಾತ್ರೆ ಯಲ್ಲಿ ಕೇವಲ ರಾಷ್ಟ್ರಧ್ವಜ ಪ್ರದರ್ಶನಕ್ಕೆ ಸೂಚನೆ

RELATED ARTICLES
- Advertisment -
Google search engine

Most Popular