ಹೊಸದಿಲ್ಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಆರಂಭಿಸಿದೆ. ಮೇ 7ರಂದು ಭಾರತ ಸೇನೆ ಪಾಕ್ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ 9 ಉಗ್ರ ನೆಲೆಗಳನ್ನು ನಾಶಪಡಿಸಿದೆ. ಇದರ ಪರಿಣಾಮವಾಗಿ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ನಾಗರಿಕ ವಿಮಾನ ಸೇವೆಗಳಿಗೆ ಬದಲಾವಣೆಉoಟಾಗಿದೆ.
ಇಂಡಿಗೋ ಏರ್‌ಲೈನ್ಸ್ ತಮ್ಮ ಸೇವೆಗಳನ್ನು ಕೇಂದ್ರದ ಸೂಚನೆ ಬರುವವರೆಗೆ ರದ್ದುಪಡಿಸಿದೆ. ಶ್ರೀನಗರ, ಜಮ್ಮು, ಲೇಹ್, ಧರ್ಮಶಾಲಾ ಸೇರಿ ಉತ್ತರ ಭಾರತದ ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳು ತಡವಾಗುವ ಅಥವಾ ರದ್ದಾಗುವ ಸಾಧ್ಯತೆ ಇದೆ. ಸ್ಪೈಸ್‌ಜೆಟ್ ಕೂಡಾ ಕೆಲ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿರುವುದಾಗಿ ತಿಳಿಸಿದೆ.