ವರದಿ : ಪ್ರಸನ್ನ ಕುಮಾರ್, ಬೆಟ್ಟದಪುರ
ಬೆಟ್ಟದಪುರ: ಭಾರತದ ನೆತ್ತಿಯ ಕಾಶ್ಮೀರದ ಪ್ರಮುಖ ಪ್ರವಾಸಿ ತಾಣವಾದ ಪಹಲ್ಗಮ್ ನಲ್ಲಿ ಪಾಕಿಸ್ತಾನ ಪ್ರಚೋದಿತ ಉಗ್ರಗಾಮಿಗಳು 26 ಅಮಾಯಕ ಪ್ರವಾಸಿಗರ ಮೇಲೆ ಧರ್ಮದ ಆಧಾರದ ಮೇಲೆ ಆಕ್ರಮಣ ಮಾಡಿದ್ದನ್ನು ಬುಧವಾರ ವಾಯು ಸೇನೆ, ಭೂ ಸೇನೆ ಹಾಗೂ ನೌಕಾ ಸೇನೆಯ ಸರ್ವ ಸನ್ನದ್ಧ ನಿರ್ಧಾರದೊಂದಿಗೆ ಆಪರೇಷನ್ ಸಿಂಧೂರ ನೆಡೆಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದೆ ಎಂದು ಗ್ರಾಮದ ಮುಖಂಡ ಸಮಾಜಸೇವಕ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಆಪರೇಷನ್ ಸಿಂಧೂರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಳಿಕ ಮಾತನಾಡಿದ ಅವರು ಭಾರತ ಯಾವುದೇ ಧರ್ಮದ ವಿರುದ್ಧ ಹೋರಾಡದೆ ಉಗ್ರರ ವಿರುದ್ಧ ಹೋರಾಟ ನೆಡೆಸಿದೆ ,ಪ್ರಧಾನ ಮಂತ್ರಿ ರವರು ಹೇಳಿದ ಹಾಗೆ ಉಗ್ರಗಾಮಿಗಳನ್ನು ಹುಡುಕಿ ಹೊಡೆದು ಹಾಕಲಾಗಿದೆ, ಪಾಕಿಸ್ತಾನ ಇನ್ನಾದರೂ ಬುದ್ದಿ ಕಲಿತು ಉಗ್ರಗಾಮಿಗಳನ್ನು ಪೋಷಿಸುವ ಗೋಜಲಿಗೆ ಹೋಗಬಾರದು, ಹೆಚ್ಚು ಉಗ್ರಗಾಮಿ ಸಂಘಟನೆಗಳು ಪಿಒಕೆ ಬಳಿ ನೆಲೆ ಕಂಡುಕೊಂಡಿರುವುದರಿಂದ ಆದಷ್ಟು ಬೇಗ ಪಿಒಕೆ ವನ್ನು ಭಾರತ ವಶಪಡಿಸಿಕೊಳ್ಳಬೇಕು, ನಮ್ಮ ಭಾರತೀಯ ಸೇನೆಯ ಚಾಕಚಕ್ಯತೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಎಲ್ಲ ರಾಷ್ಟ್ರಗಳ ಭಾಂದವ್ಯದೊಂದಿಗೆ, ವಿಶ್ವದ 16 ದೇಶಗಳು ಭಾರತೀಯರ ಬೆಂಬಲಕ್ಕೆ ನಿಂತಿರುವುದು ಶ್ಲಾಘನೀಯ ಎಂದರು.
ನಮ್ಮ ಸೈನಿಕರ ದಿಟ್ಟ ಹೋರಾಟ ಮತ್ತು ತಾಂತ್ರಿಕ ಅಭಿವೃದ್ಧಿ ಪ್ರಶಂಸಿ ಹೆಚ್ಚು ಯುವಜನತೆ ಸೇನೆಗೆ ಸೇರಿಕೊಳ್ಳಬೇಕು ಎಂದು ಕರೆನೀಡಿದರು.