ನವದೆಹಲಿ: ಅದಾನಿಯ ಲಂಚ ಪ್ರಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದರಿಂದ ಉಭಯ ಸದನಗಳ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಬೆಳಗಿನ ಕಲಾಪವನ್ನು ಸ್ವಲ್ಪ ಕಾಲ ಮುಂದೂಡಿ ಮಧ್ಯಾಹ್ನ ೧೨ಕ್ಕೆ ನಿಗದಿ ಪಡಿಸಲಾಗಿತ್ತು.ಮಧ್ಯಾಹ್ನದ ನಂತರವೂ ಅದೇ ಪರಿಸ್ಥಿತಿ ಮುಂದುವರಿದಿದ್ದರಿಂದ ಕಲಾಪವನ್ನು ಗುರುವಾರ ಮಧ್ಯಾಹ್ನ ೧೧ ಗಂಟೆಗೆ ಮುಂದೂಡಲಾಯಿತು. ಪ್ರತಿಪಕ್ಷಗಳ ಸದಸ್ಯರ ಗದ್ದಲದಿಂದ ಸೋಮವಾರ ಕಲಾಪವನ್ನು ಮುಂದೂಡಿ ಬುಧವಾರಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಇವತ್ತು ಮತ್ತೆ ಅದೇ ಗದ್ದಲ ಮುಂದುವರಿದ ಕಾರಣ ಕಲಾಪ ಮುಂದೂಡಲಾಯಿತು.