ಮೈಸೂರು: ಉದಯ ರವಿ ರಸ್ತೆಯ ಪುನರ್ ನಾಮಕರಣ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿ ಒಕ್ಕಲಿಗರ ಸಂಘ(ರಿ)ಮೈಸೂರು ಜಿಲ್ಲೆ ನಿರ್ದೇಶಕರಾದ ಎ.ರವಿ ಅವರು ಎನ್ ಐ ಇ ಕಾಲೇಜ್ ಹಾಸ್ಟೆಲ್ ಪಕ್ಕದ ರಸ್ತೆಯಿಂದ ,ಜಯನಗರ ಇಸ್ಕಾನ್ ದೇವಸ್ಥಾನದ ಮುಂಭಾಗ, ಸಿಗ್ನಲ್ ಲೈಟ್ ಮೂಲಕ ರಾಮಕೃಷ್ಣ ನಗರದ ವೃತ್ತದವರೆಗಿನ ರಸ್ತೆ ಈಗಾಗಲೇ ಹಿಂದಿನ ಸಿಐಟಿಬಿ ವತಿಯಿಂದ ಉದಯರವಿ ರಸ್ತೆ ಎಂದು ನಾಮಕರಣ ಮಾಡಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಅಸ್ತಿ ದಾಖಲಾತಿಯಲ್ಲೂ ಉದಯರವಿ ರಸ್ತೆ ಎಂದು ದಾಖಲಾಗಿರುತ್ತದೆ. ಆದರೆ ಕೆಲವು ರಾಜಕೀಯ ಹಿತಾಶಕ್ತಿಗಳು ಹಾಗೂ ಒಂದು ರಾಜಕೀಯ ಪಕ್ಷವು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಈ ರಸ್ತೆಯ ಪುನರ್ ನಾಮಕರಣ ಮಾಡಲು ಮೈಸೂರು ಮಹಾನಗರಪಾಲಿಕೆ ಪ್ರಸ್ತಾವ ಕೊಟ್ಟಿರುವುದು ರಾಷ್ಟ್ರಕವಿ ಕುವೆಂಪುರವರಿಗೆ ಮಾಡುವ ಅಪಚಾರವಾಗುತ್ತದೆ.
ಈ ಕೂಡಲೇ ಉದಯರವಿ ರಸ್ತೆಗೆ ಪುನರ್ ನಾಮಕರಣ ಮಾಡುವ ಪ್ರಸ್ತಾಪವನ್ನು ಕೈ ಬಿಡಬೇಕೆಂದು ಈ ಮೂಲಕ ಮೈಸೂರು ಹಾಗೂ ಚಾಮರಾಜನಗರ ಒಕ್ಕಲಿಗರ ಸಂಘದ ವತಿಯಿಂದ ಆಗ್ರಹ ಮಾಡುತ್ತೇವೆ. ತಪ್ಪಿದಲ್ಲಿ ಮುಂದೆ ನಡೆಯುವ ಏನೆ ಜನಾಂಗೀಯ ಸಂಘರ್ಷಕ್ಕೆ ನೀವೇ ಹೊಣೆ ಹೊರಬೇಕೆಂದು ಈ ಮೂಲಕ ಎಚ್ಚರ ನೀಡುತ್ತಿದ್ದೇವೆ ಎಂದರು.
ಮೈಸೂರಿನ ಉದಯರವಿ ರಸ್ತೆಯನ್ನು ಪುನರ್ ನಾಮಫಲಕ ಪ್ರಸ್ತಾಪವನ್ನು ಮೈಸೂರು ಮಹಾನಗರಪಾಲಿಕೆ ತಿರಸ್ಕರಿಸಬೇಕು ಎಂದು ಮೈಸೂರಿನ ಮಹಾ ಪೌರರು ಹಾಗೂ ಆಯುಕ್ತರಿಗೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ ಒಕ್ಕಲಿಗರ ಸಂಘದ ವತಿಯಿಂದ ದಿನಾಂಕ 24/08/2023ರ ಗುರುವಾರ ಬೆಳಗ್ಗೆ 10.30ಕ್ಕೆ ಮೈಸೂರು ಮಹಾನಗರಪಾಲಿಕೆ ಕಚೇರಿಯಲ್ಲಿ ಮನವಿ ಸಲ್ಲಿಸಲಾಗುವುದು. ದಯಮಾಡಿ ಮೈಸೂರಿನ ಒಕ್ಕಲಿಗ ಸಂಘ ಸಂಸ್ಥೆ ಮುಖ್ಯಸ್ಥರು ಹಾಗೂ ಮುಖಂಡರು ಆಗಮಿಸಬೇಕು ಎಂದು ಮನವಿ ಮಾಡುತ್ತೇವೆ ಎಂದು ಪ್ರಧಾನ ಕಾರ್ಯದರ್ಶಿ ಚೇತನ್ ಎಂ .ಈ ಹೇಳಿದ್ದಾರೆ.