Saturday, April 19, 2025
Google search engine

Homeರಾಜ್ಯಸುದ್ದಿಜಾಲಸಂಘ- ಸಂಸ್ಥೆ, ಸಹಕಾರ ಕ್ಷೇತ್ರದ ಯಶಸ್ಸಿಗೆ ಸಂಘಟನೆ ಹಾಗೂ ಆಡಳಿತ ವೈಖರಿ ಮುಖ್ಯ: ಶಾಸಕ...

ಸಂಘ- ಸಂಸ್ಥೆ, ಸಹಕಾರ ಕ್ಷೇತ್ರದ ಯಶಸ್ಸಿಗೆ ಸಂಘಟನೆ ಹಾಗೂ ಆಡಳಿತ ವೈಖರಿ ಮುಖ್ಯ: ಶಾಸಕ ಜಿ.ಡಿ ಹರೀಶ್ ಗೌಡ

50 ಲಕ್ಷದ ನೂತನ ಮಳಿಗೆಗಳ ಶಂಕುಸ್ಥಾಪನೆ ಕಾಮಗಾರಿಗೆ ಗುದ್ದಲಿಪೂಜೆ

ಹುಣಸೂರು: ಒಂದು ಸಂಘ, ಸಂಸ್ಥೆ ಅಥವಾ ಸಹಕಾರ ಕ್ಷೇತ್ರವಿರಲಿ ಅದು ಏಳಿಗೆಯಾಗಬೇಕಾದರೆ ಉತ್ತಮ ಸಂಘಟನೆ ಹಾಗೂ ಆಡಳಿತ ವೈಖರಿಯನ್ನು ಅರ್ಥ ಮಾಡಿಕೊಂಡರೆ ಮಾತ್ರ ಯಶಸ್ವಿಯಾಗಲು ಸಾಧ್ಯವೆಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.

ನಗರದ ಸರಸ್ವತಿಪುರಂ ಮುಖ್ಯ ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಆವರದಲ್ಲಿ 50 ಲಕ್ಷದ ನೂತನ ಮಳಿಗೆಗಳ ಶಂಕುಸ್ಥಾಪನೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಹಿಂದೆ ಇದೇ ಜಾಗದಲ್ಲಿ 50 ಲಕ್ಷದಲ್ಲಿ 10 ಮಳಿಗೆ ನಿರ್ಮಿಸಲಾಗಿದೆ. ಈಗ ಮತ್ತೆ 50 ಲಕ್ಷದಲ್ಲಿ 10 ಮಳಿಗೆ ನಿರ್ಮಾಣ ಮಾಡಲು ಟಂಡರ್ ಮುಗಿದೆದೆ ಎಂದರು.

ಆರು ತಿಂಗಳ ಈ ಸ್ಥಳದಲ್ಲಿ ಶಿಥಿಲಗೊಂಡಿದ್ದ ಕಟ್ಟಡವನ್ನು ತೆರೆವುಗೊಳಿಸಿ. ವಾಣಿಜ್ಯ ಹೊಸಮಳಿಗೆಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ಮಾಜಿ ಶಾಸಕರಾದ ದಿ.ಕರೀಯಪ್ಪಗೌಡರು ಆಶಯದಂತೆ ಇಲ್ಲಿ ರೈತ ಭವನದ ಕನಸ್ಸು ಕಂಡಿದ್ದರು. ಮುಂದೆ ಎಲ್ಲರ ಸಹಕಾರದೊಂದಿಗೆ ಅದನ್ನು ಕೂಡ ಮಾಡಲಾಗವುದು.

ಹಾಗೆ 60. ವರ್ಷಗಳ ಇತಿಹಾಸವಿರುವ ಟಿಎಪಿಸಿಎಂಎಸ್. ಸಹಕಾರ ಸಂಘಕ್ಕೆ ಇದೇ ಮೊದಲಬಾರಿಗೆ ಸಂಘದ ಅಧ್ಯಕ್ಷರಾಗಿ ಗ್ರಾಮೀಣ ಭಾಗದ ಅದರಲ್ಲೂ ದಲಿತ ಸಮುದಾಯದ ಬಸವಲಿಂಗಯ್ಯರನ್ನು ಅಧ್ಯಕ್ಷರನ್ನಾಗಿ ಮಾಡಿ,ಉಪಾಧ್ಯಕ್ಷ ಸ್ಥಾನಕ್ಕೆ ವಾಲ್ಮಿಕಿ ಸಮುದಾಯದ ನಾಗರಾಜು ಅವರನ್ನು ಆಯ್ಕೆ ಮಾಡುವ ಮೂಲಕ ಇತಿಹಾಸವನ್ನು ಸೃಷ್ಠಿಮಾಡಿದ್ದೇವೆ ಇದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹರಿಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿರುವ ಬಗ್ಗೆ ಗಮನಸೆಳದಾಗ, ಪ್ರತಾಪ್ ಸಿಂಹ ಅವರು ಎರಡು ಜಿಲ್ಲೆ ಸೇರಿದಂತೆ ಉತ್ತಮ ಕೆಲಸ ಮಾಡಿದ್ದರು ಆದರೂ ಟಿಕೆಟ್ ಕೈತಪ್ಪಿರುವುದು ಬೇಸರದ ಸಂಗತಿ. ಜತಗೆ ಅದು ಬಿಜೆಪಿ ಪಕ್ಷದ ಆಂತರಿಕ ವಿಷಯ. ಈಗ ರಾಜಮನೆತನದ ಕುಟುಂಬದ ಕುಡಿಗೆ ಸಿಕ್ಕಿದೆ ಸ್ವಾಗತ ಬಯಸುತ್ತೇನೆ. ಪ್ರತಾಪ್ ಸಿಂಹ ಅವರು ಸ್ವಾಗತಿಸಿದ್ದಾರೆ ಅಲ್ವಾ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ ಮಾತನಾಡಿ , ಶಾಸಕ ಜಿ.ಡಿ.ಹರೀಶ್ ಗೌಡರ ಸಹಕಾರದಿಂದ ಈಗಾಗಲೇ 10 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಮುಂದೆ ನಡೆಯುವ ಎಲ್ಲಾ ಕಾಮಗಾರಿಗೂ ನಮ್ಮೊಂದಿಗೆ ಇರಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಹೇಮ , ನಿರ್ದೇಶಕರಾದ ಕೆಂಪೇಗೌಡ, ಚಂದ್ರಶೇಖರ್, ನಾಗಪ್ರಸಾದ್, ಬಾಬು, ಹಾಗೂ ಅಮ್ಮರ್ ಅಬ್ದುಲ್, ಇತರರು ಇದ್ದರು.

RELATED ARTICLES
- Advertisment -
Google search engine

Most Popular